ಹಾಸನ:ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಖಡಕ್ ಆಗಿ ಉತ್ತರಿಸಿದ್ದಾರೆ. ‘ಯಡಿಯೂರಪ್ಪ ಅವರ ಮನೆಯಲ್ಲಿ ಮೂವರು, ಡಿ.ಕೆ. ಶಿವಕುಮಾರ್​ ಅವರ ಮನೆಯಲ್ಲಿ ಐದು ಜನ… ಉದಾಸಿ ಸಾಹೇಬ್ರು ಯಾರ್ರೀ? ಉದಾಸಿ ಅವರ ಹಿನ್ನೆಲೆ ಏನು? ಉದಾಸಿ ಅವರ ತಂದೆ ಏನಾಗಿದ್ದರು? ಜಾರಕಿಹೊಳಿ ಫ್ಯಾಮಿಲಿ ಬಗ್ಗೆ ಹೇಳಬೇಕಾ?… ಸುಮ್ನೆ ಏನೇನೋ ಹೇಳೋದಲ್ಲ ರೀ… ದೇವೇಗೌಡರು ಬಿಟ್ಟರೆ ನಮ್ಮ ಕುಟುಂಬದಲ್ಲಿ ರಾಜ್ಯಸಭೆಗಾಗಲೀ, ಎಂಎಲ್​ಸಿಗಾಗಲೀ ನಾವು ಹೋಗೋ ಕೆಲಸ ಮಾಡಿಲ್ಲ. ನಾವು ಜನರ ನೇರ ಆದೇಶದ ಮೇಲೆ ಅಧಿಕಾರಕ್ಕೆ ಬಂದಿರೋದು. ಜನ ತೀರ್ಮಾನ ಮಾಡಲಿ, ಜನ ಬೇಡ ಅಂದ್ರೆ ನಾವು ಹೋಗ್ತೀವಿ. ನಮ್ಮ ಸೇವೆ ಬೇಕು ಅಂದ್ರೆ ಜನ ನಮಗೆ ವೋಟ್​ ಹಾಕ್ತಾರೆ. ಡಾಕ್ಟರ್​ ಮಕ್ಕಳು ಡಾಕ್ಟರ್​ ಆಗ್ಬಾರ್ದಾ? ಎಂದು ಪ್ರಜ್ವಲ್​ ರೇವಣ್ಣ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಜ್ವಲ್​ ರೇವಣ್ಣ, ಇದು ಪ್ರಜಾಪ್ರಭುತ್ವ ದೇಶ. ಕುಟುಂಬ ರಾಜಕಾರಣ ಅಂತ ಪದೇಪದೆ ಅದನ್ನೇ ಹೇಳಬೇಡಿ. ಜನ ತೀರ್ಮಾನ ಮಾಡಲಿ, ಜನ ಬೇಡ ಅಂದ್ರೆ ನಾವು ಹೋಗ್ತೀವಿ. ನಮ್ಮ ಸೇವೆ ಬೇಕು ಅಂದ್ರೆ ಜನ ನಮಗೆ ವೋಟ್​ ಹಾಕ್ತಾರೆ. ಡಾಕ್ಟರ್​ ಮಕ್ಕಳು ಡಾಕ್ಟರ್​ ಆಗ್ಬಾರ್ದಾ? ಅಭಿವೃದ್ಧಿ ಮುಖ್ಯ ರೀ. ಕುಮಾರಣ್ಣ ಮತ್ತು ದೇವೇಗೌಡ ಏನು ಮಾಡಿದ್ದಾರೆ ಅಂತ ಚರ್ಚೆಯಾಗಲಿ. ರಾಯಚೂರಿಗೆ ನೀರು ಕೊಟ್ಟವರು ಯಾರು? ರಾಯಚೂರು ಜಿಲ್ಲೆ ಭತ್ತದ ನಾಡು ಅಂತಾಗಿದೆ. ಇದಕ್ಕೆ ಕಾರಣ ಯಾರು? ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ… ಇವರಲ್ಲಿ ಯಾರು? ಮೊದಲು ಆ ಬಗ್ಗೆ ಚರ್ಚಿಸಲಿ. ಅಭಿವೃದ್ಧಿ ಮುಖ್ಯ ರೀ. ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಸಾರಾಯಿ ಬ್ಯಾನ್​ ಮಾಡಿದ್ರು. ಪರಿಣಾಮ ಲಕ್ಷಾಂತರ ಕುಟುಂಬಕ್ಕೆ ಬದುಕಿನ ಬೆಳಕು ಸಿಕ್ಕಿದೆ… ಸುಮ್ಮನೆ ಯಾವಾಗಲೂ ಕುಟುಂಬ ರಾಜಕಾರಣ ಅಂತ ಹೇಳೋದಲ್ಲಾ? ಯಾರಿಂದ ಎಷ್ಟು ಅಭಿವೃದ್ಧಿ ಆಗಿದೆ ಅನ್ನೋದು ಮುಖ್ಯ… ಎಂದರು.
ಹಾಡಹಗಲೇ ಈಶ್ವರನ ದೇವಸ್ಥಾನದಲ್ಲಿ ಕುಖ್ಯಾತ ರೌಡಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ಮಂಡ್ಯ ಜನ

ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − eight =
Remember me
