ಧಾರವಾಡ:ಸಮವಸ್ತ್ರ ಅಂದರೆ ಸಮವಸ್ತ್ರವೇ. ಕೇಸರಿ ಶಾಲು, ಹಿಜಾಬ್‌ಗೆ ಅವಕಾಶ ಇಲ್ಲ ಅಂತಾ ಸಾಮಾನ್ಯರಿಗೂ ಗೊತ್ತಿತ್ತು. ಆದರೂ ವಿವಾದ ಮಾಡಿದ್ದರು. ಮುಖಕ್ಕೆ ಹೊಡೆದಂತೆ ಆದೇಶ ಆಗಿದೆ. ಇದನ್ನು‌ ಮುಸ್ಲಿಮರು ಸೇರಿದಂತೆ ಎಲ್ಲರೂ ಪಾಲಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಹೇಳಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ವಿವಾದ ಕುರಿತು ಹೈಕೋರ್ಟ್​ನ ಪೂರ್ಣ ಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಪ್ರಮೋದ್​ ಮುತಾಲಿಕ್​, ಇವತ್ತಿನ ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ. ಇದು ಸಂವಿಧಾನದ ವಿಜಯ. ಸಂವಿಧಾನದ ಬದ್ಧವಾದ ಸರ್ಕಾರದ ಆದೇಶ ಎತ್ತಿ‌ ಹಿಡಿದಿದೆ. ಶಾಲಾ ಕಾಲೇಜಿಗೆ ಹಿಜಾಬ್ ಪ್ರವೇಶ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಿದೆ. ಸಮವಸ್ತ್ರ ಅಂದರೆ ಸಮವಸ್ತ್ರವೇ. ಎಲ್ಲರೂ ನಿಯಮ ಪಾಲಿಸಲೇ ಬೇಕು ಎಂದರು.
ಹಿಜಾಬ್ ಧರಿಸುವುದು ಇಸ್ಲಾಂ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ವಜಾ ಮಾಡಲಾಗಿದೆ. ಶಾಲಾ-ಕಾಲೇಜುಗಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು. ಸರ್ಕಾರದ ವಸ್ತ್ರ ಸಂಹಿತೆ ನೀತಿಯನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ.
ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − three =
Remember me
