ಹುಬ್ಬಳ್ಳಿ:ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ. ಇದು ಚರ್ಚೆಯ ವಿಷಯವೇ ಅಲ್ಲ ಎಂದು ಬಿಜೆಪಿ ವಿರುದ್ಧ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮಾಂಸ ತಿಂದು ಅಂಬಾರಿ ಮೇಲಿದ್ದ ಶ್ರೀಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಸಂಸದ ಪ್ರತಾಪ್​ ಸಿಂಹ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈ ಹಿಂದೆ ಮೀನು ತಿಂದು ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಿದ್ದ ವಿಚಾರವೂ ಎದುರಳಿಗಳ ಬಾಯಿಗೆ ಆಹಾರವಾಗಿದೆ. ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಈ ಕುರಿತು ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರಗೆ ಪ್ರತಿಕ್ರಿಯಿಸಿದ ಪ್ರಮೋದ್​ ಮುತಾಲಿಕ್​, ಬಿಜೆಪಿಯವರಿಗೆ ಚರ್ಚೆಗೆ ಬೇರೆ ವಿಷಯ ಇಲ್ಲವೇ ಎಂದುಕಿಡಿ ಕಾರಿದ್ದಾರೆ.
ಬಿಜೆಪಿಯವರು ಮಾಂಸಾಹಾರ ವಿಷಯ ಬಿಟ್ಟು ಸಾವರ್ಕರ್​ ಬಗ್ಗೆ ಚರ್ಚೆ ಮಾಡಲಿ. ಹಿಂದೂಗಳಲ್ಲಿಯೂ ಸಾಕಷ್ಟು ಜನ ಮಾಂಸಾಹಾರಿಗಳಿದ್ದಾರೆ. ಕೆಲವೆಡೆ ಹಿಂದು ದೇವರುಗಳಿಗೆ ಮಾಂಸಾಹಾರವನ್ನು ಪ್ರಸಾದವನ್ನಾಗಿ ಮಾಡುತ್ತಾರೆ. ಅದರಲ್ಲೇನು ತಪ್ಪಿದೆ? ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ. ಇದು ಚರ್ಚೆಯ ವಿಷಯವೇ ಅಲ್ಲ ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.
ಉಗ್ರ ಸಂಘಟನೆ ಐಸಿಸ್ ಬೆಂಬಲಿಗ, ಕೇರಳ ಮೂಲದ ಟೆಕ್ಕಿ ಸಾವು? ಈತ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ…

ಜೂಜು ಅಡ್ಡೆ ಮೇಲೆ ದಾಳಿ: ಕೋಲಾರ ಸೈಬರ್ ಕ್ರೈಂ ಇನ್​ಸ್ಪೆಕ್ಟರ್, ಕೆಎಎಸ್​ ಅಧಿಕಾರಿ, ಉಪನ್ಯಾಸಕ ಸೇರಿ ಹಲವರ ಬಂಧನ

ಬೆಳಗಾವಿಯಲ್ಲಿ ಆಪರೇಷನ್ ಚಿರತೆ ಮತ್ತೆ ವಿಫಲ: ಕಣ್ಣೆದುರೇ ಹೋದರೂ ಬಲೆಗೆ ಬೀಳದ ಚಿರತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fourteen =
Remember me
