ಮೈಸೂರು:ನಿನಗೆ ತಾಕತ್ತಿದ್ದರೆ ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಿಸು ಎಂದು ಸಂಸದ ಪ್ರತಾಪ್​ ಸಿಂಹಗೆ ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಸುಖಾಸುಮ್ಮನೆ ಹಾದಿಬೀದಿಲಿ ನಿಂತು ಮಾತನಾಡಬೇಡ. ದಿನ ಬೆಳಗಾದರೆ ರೋಹಿಣಿ ಸಿಂಧೂರಿ ವಿರುದ್ಧ ಪತ್ರಿಕೆಗೆ ಸ್ಟೇಟ್‌ಮೆಂಟ್ ಕೊಟ್ಟರೆ ನೀನು ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡ. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ. ನೀನು ಪವರ್‌ಫುಲ್​ ಸಂಸದ. ನೀನು ಹೇಳಿದಂತೆ ಪಿಎಂ ಮತ್ತು ಸಿಎಂ ಕೇಳ್ತಾರೆ. ತಾಕತ್ತಿದ್ದರೆ ಜಿಲ್ಲಾಧಿಕಾರಿಯನ್ನ ವರ್ಗಾವಣೆ ಮಾಡಿ ತೋರಿಸು ಎಂದು ಪ್ರತಾಪ್​ ಸಿಂಹ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿರಿತಾಯಿಯ ಶವದ ಮುಂದೆಯೇ ಮಗನ ಮದುವೆ! ಕಣ್ಣೀರು ತರಿಸುತ್ತೆ ಈ ಸ್ಟೋರಿ
ಜಿಲ್ಲೆಯ ಶಾಸಕರು ನಿನಗಿಂತ ಹೆಚ್ಚು ಕೆಲಸ‌ ಮಾಡ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದರಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯಾ ಹೇಳು? ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್‌ ಸ್ಟೇಟ್‌ಮೆಂಟ್ ಕೊಟ್ಟು ಗೊಂದಲ ಏಕೆ ಮೂಡಿಸ್ತೀಯಾ? ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ. ಒಬ್ಬ ಮಾತ್ರ ಹೀರೋ, ನಾವೆಲ್ಲಾ ಝೀರೋನಾ? ಎಂದು ಪ್ರತಾಪ್‌ ಸಿಂಹಗೆ ಜಿ.ಟಿ.ದೇವೆಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಾ.ರಾ.ಮಹೇಶ್‌ ಮಾತ್ರ ಮೈಸೂರು ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದ್ದರು. ಇದಕ್ಕೆ ಕೆಂಡಾಮಂಡಲವಾದ ಜಿಟಿಡಿ, ನಾವೆಲ್ಲ ನಮ್ಮ ಸ್ವಂತ ಹಣ ಖರ್ಚು ಮಾಡ್ತಿದ್ದೀವಿ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯಾ ಹೇಳು ಎಂದು ಪ್ರಶ್ನಿಸಿದರು.
ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್​ ಸಿಂಹ ಕಿಡಿ

ಕರೊನಾಗೆ ತಾಯಿ ಬಲಿ, ಅಮ್ಮನ ಶವದ ಮುಂದೆಯೇ ಮದ್ವೆಯಾದ ಮಗ! ಕಣ್ಣೀರು ತರಿಸುತ್ತೆ ಈ ಸ್ಟೋರಿ

ಗಂಡನ ಮೊಬೈಲ್​ ಚೆಕ್​ ಮಾಡಿ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ 1 ಲಕ್ಷ ರೂಪಾಯಿ ದಂಡ!

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಗರ್ಭಿಣಿ ಕಣ್ಣೀರಿಟ್ಟರೂ ಅಡ್ಮಿಟ್​ ಮಾಡಿಕೊಳ್ಳಲಿಲ್ಲ, ಆಸ್ಪತ್ರೆ ಬಾಗಿಲಲ್ಲಿ ನಿಂತಿರುವಾಗಲೇ ಹೆರಿಗೆ, ಕೆಳಗೆ ಬಿದ್ದು ಮಗು ಸಾವು!

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 5 =
Remember me
