ಮೈಸೂರು:ಬೆಂಗಳೂರಿನ ಕೊಮ್ಮಘಟದಲ್ಲಿ ಬೃಹತ್​ ಸಮಾವೇಶ ಮುಗಿಸಿ ವಿಮಾನದಲ್ಲಿ ಹೊರಟ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿಳಿದರು. ಮೈಸೂರು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಕ್ರೀಡಾಂಗದಲ್ಲಿರುವ ಹೆಲಿಪ್ಯಾಡ್​ಗೆ ಆಗಮಿಸಿದ ಮೋದಿ ಅವರನ್ನು ಸಚಿವರಾದ ಗೋಪಾಲಯ್ಯ, ಡಾ.ಕೆ.ಸುಧಾಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ. ದೇವೇಗೌಡ, ಮೇಯರ್ ಸುನಂದಾ ಪಾಲನೇತ್ರ ಸ್ವಾಗತಿಸಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಂವಾದ ಕಾರ್ಯಕ್ರಮದತ್ತ ತೆರಳಿದರು. ಮೋದಿ ಅವರ ಜತೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕೂಡ ಆಗಮಿಸಿದ್ದಾರೆ.
ಹಳೇ ಮೈಸೂರು ಭಾಗದ ಆಯ್ದ 20 ಜನ ಅಂದ್ರೆ ಕೇಂದ್ರ ಸರ್ಕಾರದ 43 ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸುತ್ತಿದ್ದಾರೆ. ಮೋದಿ ಅವರ ಮುಂದೆ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳು ತಾವು ಯಾವೆಲ್ಲ ಯೋಜನೆಗಳಿಂದ ಸಹಾಯ ಪಡೆದಿದ್ದೇವೆ, ಅದರಿಂದ ಕುಟುಂಬಕ್ಕಾದ ಅನುಕೂಲ, ಬದುಕು ರೂಪಿಸಿಕೊಂಡ ಬಗ್ಗೆ ವಿವರಿಸುತ್ತಾ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಪ್ರಧಾನಿ ಅವರೂ ಫಲಾನುಭವಿಗಳ ಜತೆ ಮಾತಾಡುತ್ತಾ, ಅವರ ಹಿನ್ನೆಲೆಯನ್ನೂ ಮಧ್ಯೆ, ಮಧ್ಯೆ ವಿಚಾರಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಸಂವಾದದ ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ನಾಗನಹಳ್ಳಿ- ಮೈಸೂರಿನಲ್ಲಿ ‌ನೂತನ ರೈಲ್ವೆ ಕೋಚಿಂಗ್ ಸಂಕೀರ್ಣ ನಿರ್ಮಾಣಕ್ಕೆ ಸ್ಥಾಪನೆ ಮಾಡುವ ಜತೆಗೆ ಮೈಸೂರು ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ 155.49 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉತ್ಕೃಷ್ಟತಾ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
ಸಂಜೆ 7:30ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮೂರು ಗಂಟೆ ಮೊದಲೇ ಸಹಸ್ರಾರು ಸಂಖ್ಯೆಯಲ್ಲಿ ಸಭಿಕರು ಆಗಮಿಸಿದ್ದು, ಖಾಕಿ ಕಣ್ಗಾವಲಿದೆ. ಕೆ.ಎಸ್.ಎಸ್. ಸಂಸ್ಕೃತ ಪಾಠ ಶಾಲೆ ಮತ್ತು ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ವರ್ಚುವಲ್ ಆಗಿ‌ ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉಪಸ್ಥಿತಲಿರಲಿದ್ದಾರೆ. ಇದೇ ವೇಳೆ ಪತಂಜಲಿಸ್ ಯೋಗ ಸೂತ್ರಾಸ್, ಶಿವ ಸೂತ್ರಾಸ್, ನಾರಾದ ಭಕ್ತಿ ಸೂತ್ರಾಸ್ ಪುಸ್ತಕಗಳನ್ನೂ ಲೋಕಾರ್ಪಣೆ ಮಾಡುವರು. ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರಧಾನಿ ಮೋದಿ, ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವರು.
ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ: ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು… ಬೆಂಗ್ಳೂರಿನ ಮಹಾ ಜನತೆಗೆ ಧನ್ಯವಾದಗಳು…

ಬೆಂಗಳೂರಲ್ಲಿ ಮೋದಿ ಮೇನಿಯಾ: ರಸ್ತೆಯುದ್ದಕ್ಕೂ ಜೈಕಾರ

ರಾಜ್ಯದ ಎಲ್ಲ ಶಾಲೆಯಲ್ಲೂ ಯೋಗ ದಿನಾಚರಣೆ: ನಾಳೆ ಅರ್ಧ ದಿನ ಮಾತ್ರ ತರಗತಿ

ಮೈಸೂರಲ್ಲಿ ಪ್ರಧಾನಿ ಮೋದಿ ಜತೆ 45 ನಿಮಿಷ ಯೋಗ ಮಾಡಲಿದ್ದಾರೆ 15 ಸಾವಿರ ಜನ: 1200 ವಿದ್ಯಾರ್ಥಿಗಳೂ ಭಾಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
