ದೊಡ್ಡಬಳ್ಳಾಪುರ:ಆಸ್ತಿ ವಿವಾದ ಹಿನ್ನೆಲೆಯಲ್ಲಿ ಒಡಹುಟ್ಟಿದ ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಅಣ್ಣನೇ ಬರ್ಬರವಾಗಿ ಕೊಂದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಶೀಲಮ್ಮ(40) ಮೃತ ದುರ್ದೈವಿ. ಈಕೆಯ ಅಣ್ಣ ನಾಗರಾಜ್​ (45) ಕೊಲೆ ಆರೋಪಿ. ಅವಿವಾಹಿತೆಯಾಗಿದ್ದ ಸುಶೀಲಮ್ಮ, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿಕೊಂಡು ದಿನದೂಡುತ್ತಿದ್ದರು. ಕೆಲಸ ಅರಸಿಕೊಂಡು ಆಗಾಗ ಮೂರ್ನಾಲ್ಕು ತಿಂಗಳು ಗ್ರಾಮ ತೊರೆಯುತ್ತಿದ್ದರು ಎನ್ನಲಾಗಿದೆ.
ಏತನ್ಮಧ್ಯೆ ನಾಗರಾಜ್​ 11 ಲಕ್ಷ ರೂಪಾಯಿಗೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದ್ದ. ಸಹಿ ಹಾಕುವಂತೆ ಸುಶೀಲಮ್ಮಗೆ ನಾಗರಾಜು ಒತ್ತಡ ಹಾಕಿದ್ದ. ಆದರೆ ಹಣದಲ್ಲಿ ತನಗೂ ಪಾಲು ಬೇಕು ಎಂದು ಸುಶೀಲಮ್ಮ ಪಟ್ಟುಹಿಡಿದಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಅಣ್ಣ, ತಂಗಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ

ಶಿಕ್ಷಕಿಗೆ ಒಳ ಉಡುಪು ಗಿಫ್ಟ್​ ಕೊಟ್ಟು ಸುತ್ತಾಡೋಕೆ ಹೊರ ಕರೆದ ಮನೆ ಮಾಲೀಕ… ಒಲ್ಲೆ ಎಂದಾಕೆಗೆ ಕ್ವಾಟ್ಲೆ ಶುರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 13 =
Remember me
