ಬೆಳಗಾವಿ:ಸೋಮವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ವ್ಯಕ್ತಿಯೊಬ್ಬರ ಶವ ಇಟ್ಟು ಮೃತನ ಸಂಬಂಧಿಕರು ಮತ್ತು ಏಣಗಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಅಬ್ದುಲ್​ ಖಾದರ್​ ಮಿಶ್ರಿಕೋಟಿ(65) ಎಂಬುವರ ಮೃತದೇಹವಿದ್ದ ಪೆಟ್ಟಿಗೆಯನ್ನು ಶೃಂಗಾರ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತಂದು ಆಕ್ರೋಶ ವ್ಯಕ್ತಪಡಿಸಿದ ಸವದತ್ತಿ ತಾಲೂಕಿನ ಗ್ರಾಮಸ್ಥರು, ಸ್ಮಶಾನಕ್ಕೆ ತೆರಳಲು ದಾರಿ ಇಲ್ಲ. ಹಿಂದು, ಮುಸ್ಲಿಂ ಎರಡೂ ಸಮುದಾಯದ ಸ್ಮಶಾನಗಳ ಸ್ಥಿತಿಯೂ ಹೀಗೆ ಇದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಮಶಾನಕ್ಕೆ ದಾರಿ ಕೊಡಿಸದಿದ್ದರೆ ಶವವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಸಮಾಧಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟ್ಟಿ ಅವರು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರೂ ಫಲಿಸಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಡಿಸಿ ನಿತೇಶ ಪಾಟೀಲ ಅವರು ಬುಧವಾರ ಏಣಗಿ ಗ್ರಾಮಕ್ಕೆ ಭೇಟಿ ನೀಡಿ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್​ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ರೈತರು ಭೂಮಿ ನೀಡದಿದ್ದರೆ ಲಭ್ಯ ಜಾಗ ಸ್ವಾಧಿನ ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಇದಕ್ಕೂ ಮೊದಲು ಪ್ರತಿಭಟನಾಕಾರರು ಸರ್ಕಾರಕ್ಕೆ ಧಿಕ್ಕಾರ ಘೋಷಣೆ ಕೂಗಿದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಮೃತನ ಸಂಬಂಧಿ ಇಬ್ರಾಹಿಂ ಮಿಶ್ರಿಕೋಟಿ ಹಾಗೂ ಗ್ರಾಮಸ್ಥರು ಇದ್ದರು.
ಏಕಾಏಕಿ ವಾಹನ ತಡೆಯಂಗಿಲ್ಲ, ಟ್ರಾಫಿಕ್​ ಪೊಲೀಸರಿಗೆ DGP ಖಡಕ್​​ ಸೂಚನೆ: ಎಎಸ್​ಐ-ಮುಖ್ಯಪೇದೆ ಅಮಾನತು

ಬೆಂಗಳೂರಲ್ಲಿ ವಿಷ ಕುಡಿದು ಎಎಸ್ಐ ಪುತ್ರ ಆತ್ಮಹತ್ಯೆ

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

Sign in to your account
Please enter an answer in digits:eight − two =
Remember me
