ಬೆಂಗಳೂರು:ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಪಿಎಸ್​ಐ ಹುದ್ದೆ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್​ ಪೌಲ್​ ಅವರನ್ನ ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ದೊಡ್ಡ ದೊಡ್ಡವರನ್ನ ಬಿಟ್ಟು ಸಣ್ಣವರನ್ನ ಬಂಧಿಸ್ತಾರೆ. ಸತ್ಯ ಹೊರಗೆ ಬರಲ್ಲ ಎಂಬ ಆರೋಪ ದಟ್ಟವಾಗಿರುವ ನಡುವೆ ಎಡಿಜಿಪಿ ಅವರ ಬಂಧನ ಭಾರೀ ಸಂಚಲನ ಮೂಡಿಸಿದೆ.
ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರನ್ನು ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿಸುವ ಮೂಲಕ ಸಿಐಡಿ ಅಧಿಕಾರಿಗಳು ಪ್ರಭಾವಿ ವ್ಯಕ್ತಿಯನ್ನ ಬಲೆಗೆ ಕೆಡವಿದ್ದಾರೆ. ಅಮೃತ್​ ಪೌಲ್​ರ ಬಂಧನದಿಂದ ಹಲವು ರಾಜಕಾರಣಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಈ ಅಕ್ರಮ ಬೆಳಕಿಗೆ ಬಂದ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿ ಎಡಿಜಿಪಿ ಆಗಿ ಅಮೃತ್​ ಪೌಲ್​ ಕಾರ್ಯ ನಿರ್ವಹಿಸುತ್ತಿದ್ದರು. ಆ ನಂತರ ಅವರನ್ನ ಏ.27ರಂದು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಸುಮಾರು 25 ಪೋಸ್ಟ್​ಗಳಿಗೆ ಸುಮಾರು 5 ಕೋಟಿ ರೂ. ಡೀಲ್​ ಕುದುರಿಸಿದ್ದರು ಎಂಬ ಆರೋಪ ಅಮೃತ್​ ಪೌಲ್​ ಮೇಲಿದೆ. ಈ ಸಂಬಂಧ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್​ ಪೌಲ್​ ಅವರು ಸೋಮವಾರ ಬೆಳಗ್ಗೆ ಸಿಐಡಿ ಕಚೇರಿಗೆ ನಾಲ್ಕನೇ ಬಾರಿಗೆ ವಿಚಾರಣೆ ಎದುರಿಸಲು ಆಗಮಿಸಿದ್ದರು. ಈ ವೇಳೆ ಅಮೃತ್​ ಪೌಲ್​ ಅವರನ್ನ ಸಿಐಡಿ ಬಂಧಿಸಿದೆ.
ಪಂಜಾಬ್ ಮೂಲದ ಅಮೃತ್ ಪೌಲ್​ 1995ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ಎಂಎಸ್ಸಿ ಪದವಿ ಪಡೆದ ಬಳಿಕ ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡಿಕೊಂಡಿದ್ದರು.
ಪಿಎಸ್​ಐ ಹುದ್ದೆಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ತನಿಖಾ ವರದಿಯೊಂದಿಗೆ ಹೈಕೋರ್ಟ್​ಗೆ ಜೂ.30ರಂದು ಹಾಜರಾಗಿದ್ದ ಸಿಐಡಿ ಅಧಿಕಾರಿಗಳ ಮೇಲೆ ನ್ಯಾಯಮೂರ್ತಿ ಪಿ.ಸಂದೇಶ್ ಅಸಮಾಧಾನ ಹೊರಹಾಕಿದ್ದರು. ಈ ಪ್ರಕರಣದಲ್ಲಿ ಯಾವ ಮಿನಿಸ್ಟರ್ ಇರಲಿ, ಅಧಿಕಾರಿಗಳೇ ಇರಲಿ ಮೊದಲು ಕ್ರಮ ಕೈಗೊಳ್ಳಿ. ನಿಮಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೀನಿ. ಈ ಪ್ರಕರಣದ ಸಂಪೂರ್ಣ ವರದಿಯನ್ನು ಕೋರ್ಟ್​ಗೆ ಕೊಡಬೇಕು ಎಂದು ಹೈಕೋರ್ಟ್​ ಎಚ್ಚರಿಸಿತ್ತು.
ಹೈಕೋರ್ಟ್​ಗೆ ಜು.7ರಂದು ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಬೇಕು. ಈ ಹಿನ್ನೆಲೆ ಅಮೃತ್ ಪಾಲ್ ಬಂಧನ ಭಾರೀ ಸಂಚಲನ ಮೂಡಿಸಿದೆ.
ಅಮೃತ್​ ಪೌಲ್​ ಬಂಧನದ ಬೆನ್ನಲ್ಲೇ ಹೊಸ ಬಾಂಬ್​ ಸಿಡಿಸಲು ಸಜ್ಜಾದ ಡಿಕೆಶಿ! ಏನದು ಮಲ್ಲೇಶ್ವರ ರಹಸ್ಯ?

ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಬಂಧನ: ಇವರ ಹಿನ್ನೆಲೆ ಇಲ್ಲಿದೆ

ಬೆಂಗ್ಳೂರಲ್ಲಿ ಒಂಟಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಂದ ವಿದ್ಯಾರ್ಥಿನಿಯನ್ನ ರಕ್ಷಿಸಿದ ತೃತೀಯಲಿಂಗಿಗಳು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × three =
Remember me
