ಮಾಗಡಿ:ಮಗನ ಕೆಲಸದ ವಿಚಾರವಾಗಿ ಯಾರೊಂದಿಗೂ ಹಣದ ವ್ಯವಹಾರ ಮಾಡಿಲ್ಲ ಎಂದು ಪಿಎಸ್​ಐ ನೇಮಕಾತಿ ಹಗರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ದರ್ಶನ್​ಗೌಡ ಅವರ ತಂದೆ, ಜೆಡಿಎಸ್​ ಮುಖಂಡ ವೆಂಕಟೇಶ್​ ಸ್ಪಷ್ಟಪಡಿಸಿದ್ದಾರೆ. ನಾಯಕರು ತಮ್ಮ ರಾಜಕೀಯ ಹಗೆತನಕ್ಕೆ ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ನನ್ನ ಮಗ ದರ್ಶನ್​ಗೌಡ ಪಿಎಸ್​ಐ ಪರೀಕ್ಷೆ ಬರೆದು 5ನೇ ರ್ಯಾಂಕ್​ ಪಡೆದಿರುವುದು ನಿಜ. ನಮ್ಮ ಮಗ ಸಿಐಡಿ ವಿಚಾರಣೆ ಎದುರಿಸಿದ್ದಾನೆ. ಆತನ ಒಎಂಆರ್​ ಶೀಟ್​, ಹಾಲ್​ ಟಿಕೆಟ್​ ಹಾಜರುಪಡಿಸಿದ್ದಾನೆ. ತನಿಖೆ ನಡೆಯುತ್ತಿದೆ. ತಪ್ಪಿದ್ದರೆ ಶಿಕ್ಷೆಯಾಗಲಿ ಎಂದರು.
ಕೆಸರೆರಚಾಟಕ್ಕೆ ವೇದಿಕೆ:ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿರುವ ಪಿಎಸ್​ಐ ನೇಮಕಾತಿ ಹಗರಣ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್​.ಅಶ್ವತ್ಥನಾರಾಯಣ ಸಹೋದರ ಸತೀಶ್​ ಗೌಡ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ದರ್ಶನ್​ಗೌಡ ಎಂಬ ಅಭ್ಯರ್ಥಿಯಿಂದ 80 ಲಕ್ಷ ರೂ. ಪಡೆದಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಉಗ್ರಪ್ಪ ನೇರವಾಗಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕೂಡ ಪ್ರಭಾವಿ ಸಚಿವರ ತಮ್ಮನ ಮೂಲಕ ಮಾಗಡಿ ಮೂಲದ ಅಭ್ಯರ್ಥಿ ಹಣದ ವ್ಯವಹಾರ ಮಾಡಿದ್ದಾರೆ. ನಾವೆಲ್ಲ ಗಂಡಸರಲ್ಲ, ಅವರೊಬ್ಬರೇ ಗಂಡಸರು ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ್​ ವಿರುದ್ಧ ಕೈ ತೋರಿಸಿದ್ದಾರೆ. ರಾಜಕೀಯ ನಾಯಕರ ಕೆಸರೆರಚಾಟದ ಬೆನ್ನಲ್ಲೇ ಮರೂರು ಹ್ಯಾಂಡ್​ಪೋಸ್ಟ್​ನ ದರ್ಶನ್​ಗೌಡನ ತಂದೆ, ಜೆಡಿಎಸ್​ ಮುಖಂಡ ವೆಂಕಟೇಶ್​ ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ಸಚಿವರ ಸಹೋದರ ಮತ್ತು ಡಿಕೆಶಿ ಪರಿಚಯವಿದೆ:ನಾನು ತಾಪಂ ಮಾಜಿ ಉಪಾಧ್ಯಕ್ಷನಾಗಿ ರಾಜಕೀಯ ಜೀವನದಲ್ಲಿ ಇದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಅವರ ತಮ್ಮ ಸತೀಶ್​ಗೌಡ ಇಬ್ಬರೂ ಪರಿಚಯಸ್ಥರು ಹಾಗೂ ಸಂಬಂಧಿಗಳು. ಆದರೆ ಮಗನ ಕೆಲಸದ ವಿಚಾರದಲ್ಲಿ ಯಾರೊಂದಿಗೂ ಹಣದ ವ್ಯವಹಾರ ಮಾಡಿಲ್ಲ ಎಂದ ವೆಂಕಟೇಶ್​, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪರಿಚಯ ಕೂಡ ಇದೆ. ಈ ಹಿಂದೆ ಎಸ್​.ಎಂ.ಕೃಷ್ಣ ಅವರು ಕಾಂಗ್ರೆಸ್​ನಲ್ಲಿದ್ದ ಅವಧಿಯಲ್ಲಿ ನನ್ನ ಮನೆಯಲ್ಲೇ ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಇಂದು ನನ್ನ ಗುರುತು ಹಿಡಿಯುವುದಿಲ್ಲ. ನಾನು ಬಹಳ ಹಿಂದಿನಿಂದಲೂ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಎಲ್ಲ ನಾಯಕರ ಪರಿಚಯ ಇದೆ. ನಮ್ಮ ಮನೆಗೆ ಡಿ.ಕೆ. ಶಿವಕುಮಾರ್​ ಮತ್ತು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೇರಿ ಹಲವು ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ. 1994ರಿಂದಲೂ ರಾಜಕೀಯದಲ್ಲಿ ಇದ್ದೇನೆ, 1994ರಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೆ. ನಂತರ ಕಾಂಗ್ರೆಸ್​ಗೆ ಸೇರ್ಪಡೆಯಾದೆ. 2004ರಲ್ಲಿ ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿದೆ. ಪ್ರಸ್ತುತ ಜೆಡಿಎಸ್​ನಲ್ಲಿದ್ದೇನೆ ಎಂದು ವೆಂಕಟೇಶ್​ ಹೇಳಿದರು.
ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು.. ಎಲ್ಲವನ್ನೂ ಟಿವಿಯಲ್ಲಿ ನೋಡಿದೆ… ಮಗನ ಮಾತಿಗೆ ಕಣ್ಣೀರಿಟ್ಟ ದಿವ್ಯಾ

ದಿವ್ಯಾ ಹಾಗರಗಿಗೆ ಸಿಕ್ಕಿತ್ತು ಕಾಂಗ್ರೆಸ್​ ಶ್ರೀರಕ್ಷೆ! ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು ಯಾರೆಂದು ಉಲ್ಲೇಖಸಿದ ಸಿಐಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − twelve =
Remember me
