ಬೆಂಗಳೂರು:ಪಿಎಸ್​​ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ‌ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಧ್ಯವರ್ತಿಗಳ ಪೈಕಿ ಇಬ್ಬರು ಕೋರ್ಟ್​ಗೆ ಶರಣಾಗಿದ್ದಾರೆ. ಆರೋಪಿಗಳಾದ ಸಿದ್ದರಾಜು, ಬೋರೇಗೌಡನನ್ನು ಬಂಧಿಸಲಾಗಿದೆ.
ಪಿಎಸ್​ಐ ಹಗರಣದ ಪ್ರಮುಖ ಆರೋಪಿಗಳಾದ ಸಿದ್ದರಾಜು, ಬೋರೇಗೌಡ, ಬ್ಯಾಡರಹಳ್ಳಿ ಪೊಲೀಸ್​ ಠಾಣೆ ಪಿಎಸ್​ಐ ನವೀನ್ ಸೇರಿದಂತೆ ಅನೇಕರ ಬಗ್ಗೆ ಐದಾರು ತಿಂಗಳು ಕಳೆದರೂ ಸುಳಿವೇ ಸಿಕ್ಕಿರಲಿಲ್ಲ. ಹಾಗಾಗಿ ಕೋರ್ಟ್​ನ ಸೂಚನೆಯಂತೆ ಆರೋಪಿಗಳ ಪತ್ತೆಗೆ ಸಿಐಡಿ ಅಧಿಕಾರಿಗಳು ತಮಟೆಯ ಮೊರೆ ಹೋಗಿದ್ದರು. ಇತ್ತೀಚಿಗೆ ಸಿದ್ದರಾಜುವಿನ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ… ನೋಟಿಸ್ ಅಂಟಿಸಿದ್ದ ಸಿಐಡಿ ಅಧಿಕಾರಿಗಳು ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿದ್ದರು.
ಸಿದ್ದರಾಜಿವಿನ ಲಗ್ಗೆರೆ ನಿವಾಸದಲ್ಲಿ ಟಿವಿ, ಫ್ರಿಡ್ಜ್​, ಸೋಫಾ, ಕಾರು ಹಾಗೂ ಬೈಕ್ ಸೇರಿ ಚರಾಸ್ತಿ ಜಪ್ತಿಗೂ ಮುಂದಾಗಿದ್ದರು. ಇದರ ಬೆನ್ನಲ್ಲೇ ಅಂದರೆ ನಿನ್ನೆ(ಸೆ.16) ಸಿದ್ದರಾಜು ಕೋರ್ಟ್​ಗೆ ನೇರವಾಗಿ ಬಂದು ಶರಣಾಗಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸಿದ್ದರಾಜು, ಪಿಎಸ್​​ಐ ಆಗಿ ಆಯ್ಕೆಯಾಗಿದ್ದ ಗಜೇಂದ್ರ, ಮನೋಜ್​​ಗೆ ಮಧ್ಯವರ್ತಿಯಾಗಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ.
ಅತ್ತ ಮತ್ತೊಬ್ಬ ಆರೋಪಿ ಬೋರೇಗೌಡ ಎಂಬಾತನೂ ನಿನ್ನೆ ಕೋರ್ಟ್​ಗೆ ಶರಣಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತ ತೀರ್ಥಯಾತ್ರೆಗೆ ಹೋಗಿ ತಲೆಮರೆಸಿಕೊಂಡಿದ್ದ.
ಚಿಕ್ಕಬಳ್ಳಾಪುರದಲ್ಲಿ ಹೋಟೆಲ್​ನತ್ತ ನುಗ್ಗಿದ ಕ್ಯಾಂಟರ್​: ತಾಯಿ ಗರ್ಭದಲ್ಲಿದ್ದ ಮಗು ಸೇರಿ ಮೂವರ ಸಾವು

ತುಮಕೂರಿನ ಮಹಿಳಾ ಪೇದೆ ಹಾಸನದಲ್ಲಿ ಶವವಾಗಿ ಪತ್ತೆ! ಅಕ್ಕನನ್ನೇ ಕೊಂದು ಲಾಡ್ಜ್​ನಲ್ಲಿ ದುರಂತ ಅಂತ್ಯ ಕಂಡ ತಮ್ಮ

ಹಾವಿನ ಪಕ್ಕದಲ್ಲೇ ಮಲಗಿ ಸಾವು ಗೆದ್ದ ಕಂದ! ಪಾಳುಬಾವಿಗೆ ಹಸುಗೂಸನ್ನು ಎಸೆದಿದ್ದ ಹೆತ್ತಮ್ಮ… ಮಂಡ್ಯದಲ್ಲಿ ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − three =
Remember me
