ಕಲಬುರಗಿ:ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇಲ್ಲಿನ ಪ್ರಧಾನ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಗುರುವಾರ ಮೂರನೇ ದೋಷಾರೋಪಣೆ (ಚಾರ್ಜ್ ಶೀಟ್) ಸಲ್ಲಿಸಿದರು.
ನಗರದ ನೊಬೆಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ‌ನಡೆದ ಪಿಎಸ್​ಐ ಪರೀಕ್ಷಾ ಅಕ್ರಮಕ್ಕೆ ಸಂಬಂದಿಸಿದಂತೆ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಆರು ಹೊತ್ತಿಗೆಗಳಲ್ಲಿ 2060 ಪುಟಗಳ ಚಾರ್ಜ್ ಶೀಟನ್ನು ಸಿಐಡಿ ಡಿವೈಎಸ್ಪಿಗಳಾದ ಪ್ರಕಾಶ ರಾಠೋಡ, ಶಂಕರಗೌಡ ಪಾಟೀಲ ಹಾಗೂ ಸಿಬ್ಬಂದಿ ನಿಗದಿತ ಅವಧಿಗಿಂತ ಎಂಟು ದಿ‌ನ ಮೊದಲೇ ನ್ಯಾಯಾಲಯಕ್ಕೆ ಇಂದು(ಗುರುವಾರ) ಸಲ್ಲಿಸಿದರು.
ಇದರಲ್ಲಿ 124 ಕಡತಗಳು, 104 ಜನರ ಸಾಕ್ಷಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಅಕ್ರಮ ಹಾಗೂ ಎಂ.ಎಸ್. ಇರಾನಿ ಕಾಲೇಜಿನಲ್ಲಿ ನಡೆದ ಪಿಎಸ್​ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಎರಡು ಚಾರ್ಜ್ ಶೀಟ್​ಗಳನ್ನು ಸಲ್ಲಿಸಲಾಗಿದೆ.
ಕೇಸಿನ ಕಿಂಗ್​ಪಿನ್​ಗಳಾಗಿರುವ ದಿವ್ಯಾ ಹಾಗರಗಿ, ಅವರ ಪತಿ ರಾಜೇಶ್ ಹಾಗರಗಿ, ಆರ್.ಡಿ. ಪಾಟೀಲ, ಮಂಜುನಾಥ ಮೇಳಕುಂದಿ, ಅಮಾನತುಗೊಂಡ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕೆಎಸ್​ಆರ್​ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ರೇವೂರ ಹಾಗೂ ಹಲವು ಅಭ್ಯರ್ಥಿಗಳು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ‌. ತನಿಖೆ ಮುಂದುವರೆಯಲಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್​ಗೆ ಮುದ್ದಹನುಮೇಗೌಡ ರಾಜೀನಾಮೆ! ಡಿಕೆಶಿ-ಸಿದ್ದು ಜತೆ ಮಾತುಕತೆ ನಡೆಸಿ ಮಹ್ವತ್ವದ ನಿರ್ಧಾರ ಪ್ರಕಟಿಸಿದ ಎಸ್​ಪಿಎಂ

ಮಳೆಯಿಂದ ಮಂಡ್ಯದಲ್ಲಿ ಬಯಲಾಯ್ತು ಭಯಾನಕ ರಹಸ್ಯ! ಸ್ನಾನದ ಕೋಣೆಯಲ್ಲಿ ಸುರಂಗ… ಮಾಲೀಕನಿಗೆ ಕಾದಿತ್ತು ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 20 =
Remember me
