ಬೆಂಗಳೂರು:545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಬಗೆದಷ್ಟೂ ಆಳ ಎಂಬಂತಾಗಿದೆ. ಈಗಾಗಲೇ 38ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದೀಗ ಮಾಗಡಿಯ ದರ್ಶನ್​ಗೌಡನ ಬಂಧನದ ಬೆನ್ನಲ್ಲೇ ಮತ್ತಿಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇಬ್ಬರೂ ಪೊಲೀಸ್​ ಪೇದೆಗಳು. ಪಿಎಸ್​ಐ ಆಗಿ ಆಯ್ಕೆಯಾಗಿದ್ದರು.
ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಮತ್ತು ಬೆಂಗಳೂರಿನ ಕಲಾಸಿಪಾಳ್ಯ ಠಾಣೆಯ ಪೇದೆ ಹರೀಶ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಮೋಹನ್ ಕುಮಾರ್ ಕೂಡ ಪಿಎಸ್​ಐ ಪರೀಕ್ಷೆಯಲ್ಲಿ ಪಾಸ್​ ಆಗಿದ್ದ. ಅನುಮಾನ ಬಂದು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದಾಗ ಮೋಹನ್ ನೀಡಿದ್ದ ಕಾರ್ಬನ್ ಶೀಟ್ ಮತ್ತು ಒರಿಜಿನಲ್ ಕಾಪಿಗೂ ವ್ಯತ್ಯಾಸ ಕಂಡು ಬಂದಿತ್ತು. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೋಹನ್ ಕುಮಾರ್​ನನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹರೀಶ್ ಪಿಎಸ್​ಐ ಹುದ್ದೆಗಾಗಿ ಹರೀಶ್​ 50 ಲಕ್ಷ ರೂ.ಗೆ ಇಬ್ಬರು ವ್ಯಕ್ತಿಗಳ ಮೂಲಕ ಡೀಲ್​ ಮಾಡಿಕೊಂಡಿದ್ದ. ಈ ಪೈಕಿ 30 ಲಕ್ಷ ಹಣ ನೀಡಿ ಒಎಂಆರ್ ಶೀಟ್ ತಿದ್ದಲು ಹಣ ನೀಡಿದ್ದ. ಎಕ್ಸಾಂ ವೇಳೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟು ಬಂದಿದ್ದ. ಅನುಮಾನದ ಮೇಲೆ ಸಿಐಡಿ ಅಧಿಕಾರಿಗಳು ಹರೀಶ್​ನನ್ನ ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಈತನ್ನು ಬಂಧಿಸಿದ್ದಾರೆ. ಹರೀಶ್​ನ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ತನಿಖೆ ಮುಂದುವರಿದಿದೆ.
PSI ಹುದ್ದೆ ಅಕ್ರಮ: ಸಿಐಡಿ ಪೊಲೀಸರಿಂದ ಮಾಗಡಿಯ ದರ್ಶನ್​ ಗೌಡ ಕೊನೆಗೂ ಅರೆಸ್ಟ್​

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × 3 =
Remember me
