ರಾಮನಗರ:ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಬಗೆದಷ್ಟೂ ಆಳ ಎಂಬಂತೆ ಸ್ಫೋಟಕ ರಹಸ್ಯ ಬಯಲಾಗುತ್ತಲೇ ಇದೆ. ಇದೀಗ ಐಪಿಎಸ್​ ಅಧಿಕಾರಿ ಕಮಲ್​ ಪಂತ್​ ಹೆಸರನ್ನು ಪ್ರಸ್ತಾಪಿಸುವ ಮೂಲಕ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದು, ಭಾರೀ ಸಂಚಲನ ಹುಟ್ಟುಹಾಕಿದೆ.
ಚನ್ನಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಪಿಎಸ್​ಐ ಹಗರಣವನ್ನು ಬಯಲು ಮಾಡಿದ್ದು ಸರ್ಕಾರವಲ್ಲ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆ ಆಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ದೊಡ್ಡ ಕಥೆ ಇದೆ. ಇಲ್ಲಿ ನಡೆದ ಕೊಲೆಯ ವಿಚಾರವಾಗಿ ಬಿಜೆಪಿಯ ವಕ್ತಾರನೊಬ್ಬ ಕಮಲ್ ಪಂತ್​ ವಿರುದ್ಧ ಆರೋಪ ಮಾಡಿದ್ದರು. ಪೊಲೀಸ್ ಇಲಾಖೆಯು ಇದು ಆಕ್ಸಿಡೆಂಟ್ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಗಲಾಟೆಯಾಗಿ ಕೊಲೆಯಾಯ್ತು ಎಂದು ಕಥೆ ಕಟ್ಟಿದ್ದರು. ನಿಷ್ಠಾವಂತ ಪೊಲೀಸ್ ಅಧಿಕಾರಿ ಮೇಲೆ ಆರೋಪ ಮಾಡಿದ್ದ ಬಿಜೆಪಿಯ ಆ ವ್ಯಕ್ತಿಗೆ ಪಿಎಸ್​ಐ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಕಲಬುರ್ಗಿಯಲ್ಲಿ ಅರೆಸ್ಟ್ ಆಗಿರುವವರ ಲಿಂಕ್ ಇತ್ತು. ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂತ್​ಗೆ ಅವಮಾನ ಮಾಡದಿದ್ದರೆ ಈ ವಿಚಾರ ಹೊರ ಬರುತ್ತಿರಲಿಲ್ಲ. ಇದರ ಹಿಂದೆ ದೊಡ್ಡ ಕಥೆಯೇ ಇದೆ. ಸರ್ಕಾರಕ್ಕೆ ಬುದ್ಧಿ ಕಲಿಸಲು ಕಮಲ್​ ಪಂತ್​ ಅವರ ಅಭಿಮಾನಿಗಳೇ ಹೊರ ತೆಗೆದಿದ್ದಾರೆ ಎಂದರು.
ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಸಚಿವ ಅಶ್ವಥ್ ನಾರಾಯಣ್​ ವಿರುದ್ಧ ಕಾಂಗ್ರೆಸ್​ ಬಳಿ ದಾಖಲೆ ಎಲ್ಲಿದೆ? ಅಶ್ವಥ್ ನಾರಾಯಣ್​ ವಿರುದ್ಧ ಅವರ ಜೊತೆಯಲ್ಲಿದ್ದವರೇ ಮಾಧ್ಯಮಕ್ಕೆ ಮಾಹಿತಿ ಕೊಟ್ಟರು. ಅಮಿತ್ ಷಾ ರಾಜಯಕ್ಕೆ ಬರುವ ಸಂದರ್ಭದಲ್ಲಿ ಇದನ್ನ ಎಕ್ಸ್​ಪೋಸ್ ಮಾಡಲು ಅವರೇ ಅಶ್ವಥ್​ರ ಹೆಸರನ್ನು ಹೊರತೆಗೆದಿದ್ದಾರೆ. ಅಮಿತ್ ಷಾ ತಲೆಗೆ ಹೋಗಲಿ ಎಂದು ಅಶ್ವಥ್ ನಾರಾಯಣ್​ರ ವಿರುದ್ಧ ಮಾಹಿತಿ ನೀಡಿದ್ದಾರೆ. ಇವರ ವಿಕೆಟ್ ಉರುಳಿಸಲು ಬಿಜೆಪಿಯಲ್ಲೇ ಹುನ್ನಾರ ನಡೆದಿದೆ. ಬಿಜೆಪಿ ಮನೆಗೆ ಬಿಜೆಪಿಯವರೇ ಬೆಂಕಿ ಹಚ್ಚಿಕೊಳ್ಳುತ್ತಿದ್ದಾರೆ, ನಾವು ಹಚ್ಚಬೇಕಿಲ್ಲ ಎಂದ ಎಚ್​ಡೊಕೆ, ಕಾಂಗ್ರೆಸ್​ನವರಿಗೆ ರಿಯಲ್ ಇಶ್ಯೂ ಮೇಲೆ ಹೋರಾಟ ಮಾಡುವ ಶಕ್ತಿಯಿಲ್ಲ. ಯಾರೋ ಹೇಳಿದನ್ನ ಹೇಳ್ಕೋತ್ತಾರೆ ಅಷ್ಟೆ. ಕಮಲ್ ಪಂತ್​ಗೆ ಅವಮಾನ ಮಾಡದಿದ್ದರೆ ಈ ಅಕ್ರಮ ಬಯಲಾಗುತ್ತಿರಲಿಲ್ಲ. ಎಲ್ಲರೂ ದುಡ್ಡು ಕೊಟ್ಟು ಆಯ್ಕೆ ಆಗಿದ್ದಾರೆ ಎನ್ನಲು ಆಗಲ್ಲ. ಶೇ.30-40 ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು. ಯಾರೇ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.
PSI ಎಕ್ಸಾಂ ಅಕ್ರಮ: ನನಗೆ ಸಚಿವರ ಸಂಬಂಧಿ ಮತ್ತು ಡಿಕೆಶಿ ಪರಿಚಯವಿದೆ… ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ ದರ್ಶನ್​ ಗೌಡನ ತಂದೆ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಕರ್ತವ್ಯನಿರತ ಏಜೆಂಟ್​ನ ಬರ್ಬರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
