ಬೆಂಗಳೂರು:ವ್ಯಾಪಕ ಅಕ್ರಮ ಆರೋಪಗಳಿಂದಾಗಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಪಿಎಸ್​ಐ ಪರೀಕ್ಷೆಯನ್ನೇ ರಾಜ್ಯ ಸರ್ಕಾರ ರದ್ದು ಮಾಡಿ, ಮರು ಪರೀಕ್ಷೆ ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಾಮಾಣಿಕ ಅಭ್ಯರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಮರು ಪರೀಕ್ಷೆ ನಿರ್ಧಾರವನ್ನು ಹಿಂಪಡೆಯಬೇಕು. ಆರೋಪಿತರಿಗೆ-ತಪ್ಪಿತಸ್ಥರ ಆಯ್ಕೆ ರದ್ದು ಮಾಡಿ, ಉಳಿದವರಿಗೆ ನೇಮಕಾತಿ ಆದೇಶ ಪತ್ರ ಕೊಡಬೇಕು. ಒಂದಲ್ಲ 10 ಬಾರಿ ತನಿಖೆ ಮಾಡಿ. ತಪ್ಪಿತಸ್ಥರನ್ನ ಪತ್ತೆ ಮಾಡಿ ಶಿಕ್ಷಿಸಿ. ಆದರೆ ಪ್ರಾಮಾಣಿಕರಿಗೆ ಅನ್ಯಾಯ ಮಾಡಬೇಡಿ. ಕೇವ 8 ಮಂದಿಯನ್ನ ಅರೆಸ್ಟ್​ ಮಾಡಿ ಇಡೀ ಪರೀಕ್ಷೆಯನ್ನೇ ರದ್ದು ಮಾಡಿದ್ರೆ ಹೇಗೆ? ಕಾಣದ ಕೈಗಳು ಯಾವೆಲ್ಲ ಇದೆ ಎಂಬುದು ತನಿಖೆಯಲ್ಲಿ ಬಯಲಾಗಬೇಕು ಎಂದು ಆಗ್ರಹಿಸುತ್ತಾ ಶನಿವಾರ ಬೆಳಗ್ಗೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಅಭ್ಯರ್ಥಿಗಳು ಧರಣಿ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಪ್ರಮಾಣಿಕರಿಗೆ ಆದೇಶ ಪತ್ರ ಕೊಡಿ. ಕೇವಲ 8 ಜನರನ್ನ ಅರೆಸ್ಟ್ ಮಾಡಿ ಪ್ರಮಾಣಿಕರಿಗೆ ಅನ್ಯಾಯ ಮಾಡಬೇಡಿ. ಸಿಐಡಿ, ಸಿಬಿಐ ಯಾವುದೇ ತನಿಖೆ ಮಾಡಿ. ತರಾತುರಿಯಲ್ಲಿ ಆದೇಶ ಮಾಡಿ ನಮಗೆ ಅನ್ಯಾಯ ಮಾಡಬೇಡಿ. ಸರ್ಕಾರದಿಂದ ಮರು ಪರೀಕ್ಷೆ ನಿರ್ಧಾರ ವಾಪಸ್ ತೆಗೆದುಕೊಳ್ಳೋವರೆಗೆ ಈ ಹೋರಾಟ ನಿಲ್ಲಿಸಲ್ಲ. ಇದು ನಮ್ಮ ಜೀವನದ ಪ್ರಶ್ನೆ. ನಾವು ಉಪವಾಸ ಸತ್ಯಾಗ್ರಹ ಮಾಡ್ತೇವೆ. ಕೇವಲ 20 ದಿನ ಸಿಐಡಿ ತನಿಖೆ ಆಗಿದೆ‌. ದಿವ್ಯಾ ಹಾಗರಗಿ ಬಂಧನವಾಗ್ತಿದ್ದಂತೆ ಮರು ಪರೀಕ್ಷೆ ಅಂತಿದ್ದಾರೆ. ಇದರ ಹಿಂದೆ ಬೇರೆ ಏನೋ ಇದೆ‌. ದೊಡ್ಡ ಕೈಗಳು ಇರುವ ಶಂಕೆ ಇದೆ‌. ಅದನ್ನ ಮುಚ್ಚಿಡಲು ಈ ಕ್ರಮ ತೆಗೆದುಕೊಂಡಿದ್ದಾರೆ ಅನ್ಸುತ್ತೆ. ನಾವು ಚರ್ಚೆ ನಡೆಸಿ ಕೋರ್ಟ್ ಮೊರೆ ಹೋಗಲು ನಿರ್ಧಾರ ಮಾಡ್ತೇವೆ ಎಂದು ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿ ಬಸವರಾಜು ಹೇಳಿದರು.

ತನಿಖೆ ಬಾಕಿಯಿರುವಾಗಲೇ ಮರು ಪರೀಕ್ಷೆ ಮಾಡುತ್ತಿದ್ದಾರೆ. ಯಾರ್ಯಾರು ಅಕ್ರಮ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ತಪ್ಪು ಮಾಡದೇ ಪ್ರಮಾಣಿಕವಾಗಿ ಇರುವವರಿಗೂ ಮರುಪರೀಕ್ಷೆ ಮಾಡಿ ಶಿಕ್ಷೆ ನೀಡುತ್ತಿದ್ದಾರೆ. ದಿವ್ಯಾ ಹಾಗರಗಿ ಬಂಧನ ಆಗುತ್ತಿದ್ದಂತೆ ಮರು ಪರೀಕ್ಷೆ ಆದೇಶ ಮಾಡಲಾಗಿದೆ. ಇದರಲ್ಲಿ ಯಾವುದೋ ಷಡ್ಯಂತ್ರ ಇದೆ. ದಿವ್ಯಾ ಹಾಗರಗಿ ಹಿಂದೆ ದೊಡ್ಡವರ ಕೈ ವಾಡ ಇದೆ. ಇನ್ನು ಸಿಐಡಿ ತಂಡ ತನಿಖೆಯ ಪ್ರಾಥಮಿಕ ವರದಿಯನ್ನೇ ನೀಡಿಲ್ಲ. ಈಗಿರುವಾಗ ಮರು ಪರೀಕ್ಷೆಗೆ ಸರ್ಕಾರ ಆದೇಶ ಮಾಡಿರೋದು ಸರಿಯಲ್ಲ.ಇದರ ವಿರುದ್ಧ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋರಾಟ ಮಾಡುತ್ತೇವೆ ಎಂದು ಅಭ್ಯರ್ಥಿ ಪವಿತ್ರ ನೋವಿನಲ್ಲೇ ಪ್ರತಿಕ್ರಿಯಿಸಿದರು.
ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಇ-ಖಾತೆಯಲ್ಲಿ ಅಕ್ರಮ: ರಾಮನಗರದಲ್ಲಿ ಪಿಡಿಒ ಆತ್ಮಹತ್ಯೆ

ಡೋಂಗಿ ಬಾಬಾನ ಬಲೆಗೆ ಬಿದ್ದ ವಿವಾಹಿತೆ… ಚಾಮರಾಜನಗರದಲ್ಲಿ ನಡೆಯಬಾರದ್ದು ನಡೆದೇ ಹೋಯ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eleven =
Remember me
