ಬೆಂಗಳೂರು:ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಕಲಬುರಗಿಯ ದಿವ್ಯಾ ಹಾಗರಗಿಗೆ ಗೃಹ ಸಚಿವರ ವಾರ್ನಿಂಗ್​ ಕೊಟ್ಟಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು, ಇಲ್ಲವಾದರೆ ಶೀಘ್ರವೇ ನಿಮ್ಮ ಆಸ್ತಿ ಮುಟ್ಟುಗೋಲು ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ದಿವ್ಯಾ ಹಾಗರಗಿ ಅವರೇನು ಸ್ಟ್ರಾಂಗ್ ಇಲ್ಲ. ಅವ್ರು ಊರು ಬಿಟ್ಟಿದ್ದಾರೆ. ಈಗಾಗಲೇ ಅವರ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ಶೀಘ್ರವೇ ಅವರ ಆಸ್ತಿ ಮುಟ್ಟುಗೋಲು ಹಾಕಲಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು. ಹಣಕ್ಕೆ ಸರ್ಕಾರಿ ಜಾಬ್ ಗಳನ್ನು ಮಾರಾಟ ಮಾಡುವ ಗ್ಯಾಂಗ್‌ ಅನ್ನು ಹೊರಗೆ ತರ್ತೇವೆ. ಎಲ್ಲವೂ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ ಎಂದರು.
ಪ್ರಿಯಾಂಕಾ ಖರ್ಗೆ ಅನೇಕ ಆರೋಪ ಮಾಡಿದ್ದಾರೆ. ಅವರಿಗೆ ಸಿಐಡಿ ನೋಟಿಸ್ ಕೊಟ್ಟಿದೆ. ಅವರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಅವರು ದಾಖಲೆ ಕೊಡಬಹುದು ಅಲ್ವಾ? ಅವರ ತಂದೆ ಎಷ್ಟು ದೊಡ್ಡವರು? ಅವರಿಗೆ ತನಿಖೆ ಬಗ್ಗೆ ಗೊತ್ತಿಲ್ವಾ? ವಿಚಾರಣೆ ತಾನೇ ಮಾಡೋದು, ಅವರ ಬಳಿ ಇರುವ ದಾಖಲೆಯನ್ನು ಕೊಡಲಿ ಎಂದು ಆಗ್ರಹಿಸಿದ ಗೃಹ ಸಚಿವರು, ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ತೀನಿ ಅನ್ನೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಎಸ್​ಪಿಎಂ ಅವರನ್ನ ಮುಗಿಸಲು ಕಾಂಗ್ರೆಸ್​ನವರೇ ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ರು: ದೇವೇಗೌಡ

ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:18 + eleven =
Remember me
