ಬಳ್ಳಾರಿ:ಸಾರ್ವಜನಿಕ ಸ್ಥಳದಲ್ಲಿಯೇ ವ್ಯಕ್ತಿಯೊಬ್ಬರಿಗೆ ಬಳ್ಳಾರಿ ಜಿಲ್ಲೆಯ ಕುರಗೊಡು ಪೊಲೀಸ್ ಠಾಣೆ ಪಿಎಸ್​ಐ ಮಣಿಕಂಠ ಅವಾಚ್ಯವಾಗಿ ನಿಂದಿಸಿ ಕಪಾಳ ಮೋಕ್ಷ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಜನರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪೊಲೀಸ್ ಬಾಯಲ್ಲಿ ಇದೆಂಥಾ ಮಾತು? ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್​ ಕುಮಾರ್​, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಏನಿದು ಪ್ರಕರಣ?:ಹದಿನೈದು ದಿನಗಳ ಹಿಂದೆ ಕುರುಗೋಡು ತಾಲೂಕಿನ ಕೋಳೂರು ಕ್ರಾಸ್​ನಲ್ಲಿ ಅನಾಥ ಶವ ನೋಡಲು ಗುಂಪು ಸೇರಿದ್ದ ಜನರನ್ನು ಚದುರಿಸುವ ವೇಳೆಯಲ್ಲಿ ಕೋಳೂರು ಗ್ರಾಮದ ಈರಣ್ಣ ಎಂಬುವರ ಮೇಲೆ ಪಿಎಸ್​ಐ ಮಣಿಕಂಠ ಹಲ್ಲೆ ನಡೆಸಿದ್ದರು. ಕಾಲು ಮುರಿದಿದೆ ಎನ್ನಲಾಗಿತ್ತು. ರಾಜಿ ಸಂಧಾನ ಮಾಡಿಕೊಂಡ ಪಿಎಸ್​ಐ ಅವರು ಈರಣ್ಣ ಬಳಿ ಕ್ಷಮೆ ಕೇಳಿದ್ದರು. ಕ್ಷಮೆ ಕೇಳುವ ವಿಡಿಯೋವನ್ನು ವೈರಲ್​ ಆಗಿ ಭಾರಿ ಸದ್ದು ಮಾಡಿತ್ತು. ಆದರೆ, ಆ ವ್ಯಕ್ತಿಯ ಕಾಲು ಮುರಿದಿರಲಿಲ್ಲ, ಅವರು ಮೊಹರಂನಲ್ಲಿ ಹಬ್ಬದಲ್ಲಿ ಕುಣಿದಿದ್ದಾರೆ ಎನ್ನುವ ಸುದ್ದಿಯೂ ವೈರಲ್​ ಆಗಿತ್ತು ಇದರ ಬೆನ್ನಲ್ಲೇ, ‘ಸೂ… ಮಗನೆ, ಬೋ… ಮಗನೆ, ಬಾರಲೆ ಯೂನಿಫಾರಂ ಬಿಚ್ಚಿ ಬರ್ತೀನಿ’ ಎಂದು ಈರಣ್ಣಗೆ ಪಿಎಸ್​ಐ ಅವಾಜ್​ ಹಾಕುತ್ತಾ ಕಪಾಳ ಮೋಕ್ಷ ಮಾಡಿರುವ ವಿಡಿಯೋ ವೈರಲ್​ ಆಗಿದೆ.
ಗುರುವಾರ(ನಿನ್ನೆ) ಕೋಳೂರಿನಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಜನ್ಮದಿನದ ಹಿನ್ನೆಲೆ ಹಾಕಲಾಗಿದ್ದ ಬ್ಯಾನರ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದರು. ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ಶುರುವಾಗಿತ್ತು. ಪ್ರತಿಭಟನೆಗೆ ಕೆಲವರು ಮುಂದಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾಗಿದ್ದರು. ಅಲ್ಲಿಯೇ ಈರಣ್ಣ ನಿಂತಿದ್ದ. ಈತನೇ ಗ್ರಾಮದಲ್ಲಿ ಗಲಾಟೆ ಎಬ್ಬಿಸಿದ್ದಾನೆ ಎಂದು ಕುರುಗೋಡು ಪಿಎಸ್ಐ ಮಣಿಕಂಠ, ಕಪಾಳ ಮೋಕ್ಷ ಮಾಡಿದ್ದಾರೆ. ‘ಯುನಿಫಾರಂ ಬಿಚ್ಚಾಕ್ತಿನಲೇ ಬೋ… ನಾನು‌ ಇರಬೇಕು- ಇಲ್ಲ ನೀನು ಇರಬೇಕು. ಬಾರಲೇ ಸೂ…ಮಗನೆ…’ ಎಂದು ಅವಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಅತ್ತ ಮಣಿಕಂಠ ಅವರನ್ನ ಅಮಾನತು ಮಾಡುವಂತೆ ಆಗ್ರಹಿಸಿದ ಪೊಲೀಸ್​ ಠಾಣೆ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
Have enquired regarding this video . Appropriate action is being initiated.https://t.co/whXudanMq8
— alok kumar (@alokkumar6994)August 12, 2022

ಬಳಿಕ ಪಿಎಸ್​ಐ ಕೆ.ಎಚ್. ಮಣಿಕಂಠ ಅವರನ್ನು ಕುರುಗೋಡ್ ಠಾಣೆಯಿಂದ ಬಳ್ಳಾರಿ ಡಿವೈಎಸ್​ಪಿ ಕಚೇರಿಗೆ ವರ್ಗಾವಣೆ ಮಾಡಿ ಎಸ್​ಪಿ ಆದೇಶಿಸಿದ್ದಾರೆ.
ಗಾಂಜಾ ಮಿಶ್ರಿತ ಚಾಕೋಲೆಟ್​ ಮಾರಾಟ: ಅಬಕಾರಿ ಪೊಲೀಸರಿಂದ ಇಬ್ಬರ ಬಂಧನ

ತನಿಖೆಯಲ್ಲಿ ದಕ್ಷತೆ ಮೆರೆದ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆಯ ಪದಕ

ಕ್ರೈಸ್ಟ್ ಕಾಲೇಜಿನ 7 ವಿದ್ಯಾರ್ಥಿಗಳ ಹುಚ್ಚಾಟ: ಕೆರೆಗೆ ಕಾರು ಪಲ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
