ಎನ್​.ಆರ್​.ಪುರ:ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಡಿ ತಲೆಮರೆಸಿಕೊಂಡಿದ್ದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿ ವಿರುದ್ಧ ದಾಖಲಾದ ಕೇಸ್​ ಒಂದಲ್ಲ, ಎರಡಲ್ಲ ಬರೋಬ್ಬರಿ 11 ಪ್ರಕರಣ!
ಶಿಕ್ಷಕ ಪ್ರಭು ನಾಯ್ಕ ಬಂಧಿತ. ಈತನ ವಿರುದ್ಧ ಬಿಇಒ ದೂರು ನೀಡಿದ್ದರು. ಜ.16ರ ಬೆಳಗ್ಗೆಯಿಂದಲೇ ಶಾಲೆಗೆ ಎಎಸ್ಪಿ ಶ್ರುತಿ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು. ಸಂಜೆ ವೇಳೆಗೆ ಶಾಲೆಗೆ ಎಸ್​ಪಿ ಎಂ.ಎಚ್​. ಅಕ್ಷಯ್​ ಭೇಟಿ ನೀಡಿ ತನಿಖಾ ವರದಿ ಪರಿಶೀಲಿಸಿದ್ದರು. ನಂತರ ಶಿಕ್ಷಕನ ವಿರುದ್ಧ 11 ಎಫ್​ಐಆರ್​ಗಳು ದಾಖಲಾಗಿದ್ದವು. ಶಿಕ್ಷಕನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಐದಾರು ದಿನಗಳಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಶಿಕ್ಷಕನನ್ನು ತರೀಕೆರೆಯಲ್ಲಿ ಬಂಧಿಸಿದರು.
ಶಿಕ್ಷಕನ ದೂರವಾಣಿ ಹಾಗೂ ಆತ ಎನ್​.ಆರ್​.ಪುರದಿಂದ ತೆರಳಿದ್ದ ಬಗ್ಗೆ ಪಟ್ಟಣದ ಹಲವು ಸಿಸಿ ಕ್ಯಾಮರಾಗಳಲ್ಲಿ ಪರಿಶೀಲಿಸಿದಾಗ ಆರೋಪಿಯು ವಾಹನದಲ್ಲಿ ಬೇರೊಬ್ಬರಿಂದ ಡ್ರಾಪ್​ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಯಿತು. ಇದನ್ನು ಆಧರಿಸಿ ಹೊರಟ ಪೊಲೀಸರು ತರೀಕೆರೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.
ದೈವಿ ಕಲ್ಲು ಇದ್ದವರ ಬಳಿ ಅದೃಷ್ಟ ಒಲಿಯುತ್ತೆ… ಎಂದು ಯೂಟೂಬ್​ಗೆ ವಿಡಿಯೋ ಹಾಕಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

ಕೆಜಿಎಫ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 30 ವರ್ಷ ಜೈಲು ಶಿಕ್ಷೆ!

ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 6 =
Remember me
