ಕೊಳ್ಳೇಗಾಲ:ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಯ ಕಣ್ಣೆದುರೇ ಪ್ರಿಯಕರನೊಂದಿಗೆ ಕಾರಿನಲ್ಲಿ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.
ಪಟ್ಟಣಕ್ಕೆ ಇತ್ತೀಚೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತನ್ನ ತಾಯಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಎದುರೇ ಪ್ರಿಯಕರನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾಳೆ.ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದ ಸುಜಾತ ಎಂಬುವರ ಪುತ್ರಿ ಪ್ರಿಯಕರನ ಜತೆ ನಾಪತ್ತೆಯಾಗಿದ್ದಾಳೆ. ಈಕೆ ಪಟ್ಟಣದ ಎಸ್‌ವಿಕೆ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಮೇ 6ರಂದು ಕೊಳ್ಳೇಗಾಲ ಪಟ್ಟಣದ ಮಾನಸ ಕಾಲೇಜಿನಲ್ಲಿ ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಮಗಳನ್ನು ಕರೆತಂದ ತಾಯಿ, ಪರೀಕ್ಷೆ ಬರೆಯಲು ಒಳ ಕಳುಹಿಸಿ ಮಗಳಿಗಾಗಿ ಪರೀಕ್ಷೆ ಮುಗಿಯುವರೆಗೂ ಹೊರಗೆ ಕಾದು ಕುಳಿತ್ತಿದ್ದರು.
ಈ ಪರೀಕ್ಷೆ ಮುಗಿಸಿ ಹೊರ ಬರುತ್ತಿದ್ದಂತೆ ಕಾಲೇಜು ಪಕ್ಕದಲ್ಲಿದ್ದ ಪೆಟ್ರೊಲ್ ಬಂಕ್​ ಬಳಿಗೆ ವಿದ್ಯಾರ್ಥಿನಿ ಏಕಾಏಕಿ ಓಡಿಹೋಗಿದ್ದಾಳೆ. ಇದನ್ನು ನೋಡಿದ ತಾಯಿ, ಮಗಳೇ ನಿಲ್ಲು, ಯಾಕವ್ವ ಓಡ್ತಿದ್ದೀಯಾ? ಬಾ ಎಂದು ಕೂಗುತ್ತಿದ್ದರೂ ಕಿವಿಗೊಡದೆ ಪೆಟ್ರೋಲ್​ ಬಂಕ್​ ಬಳಿ ನಿಂತಿದ್ದ ಕಾರೊಂದನ್ನು ಹತ್ತಿ ಪರಾರಿಯಾದಳು. ಕಾರಿನ ಹಿಂದೆ ತಾಯಿಯೂ ಸ್ವಲ್ಪ ದೂರ ಓಡಿದರೂ ಕಾರನ್ನು ನಿಲ್ಲಿಸಿಲ್ಲ.
ಪರಾರಿಯಾಗಿರುವ ಮಗಳನ್ನು ಹುಡುಕಿಕೊಡಿ ಎಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಸುಜಾತ ದೂರು ನೀಡಿದ್ದಾರೆ. ಮುಳ್ಳೂರು ಗ್ರಾಮದ ಯುವಕ ನಾಗರಾಜು ಎಂಬಾತ ನನ್ನ ಮಗಳನ್ನು ಕರೆದೊಯ್ದಿರುವ ಅನುಮಾನವಿದೆ ಎಂದು ವಿವರಿಸಿದ್ದಾರೆ. ಇನ್ನು ಪ್ರಿಯಕರನ ಜೊತೆ ಪರಾರಿಯಾದ ವಿದ್ಯಾರ್ಥಿನಿಗೆ ಇನ್ನೂ 18 ವರ್ಷ ತುಂಬಿಲ್ಲ. ಇನ್ನೊಂದು ತಿಂಗಳು ಬಾಕಿ ಇದೆ.
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
