ಬೆಂಗಳೂರು:ಕರ್ನಾಟಕ ರತ್ನ ಡಾ.ಪುನೀತ್​ ರಾಜ್​ಕುಮಾರ್​ ಅಭಿನಯದ ‘ಗಂಧದ ಗುಡಿ’ ಪ್ರಿರಿಲೀಸ್ ಇವೆಂಟ್​ಗೆ ದಿನಗಣನೆ ಆರಂಭವಾಗಿದೆ. ಅ.21ರಂದು ಅದ್ದೂರಿಯಾಗಿ ನಡೆಯಲಿರುವ ಪ್ರಿರಿಲೀಸ್ ಇವೆಂಟ್​ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಸಮಾಗಮ ಆಗಲಿದೆ. ಇದೇ ವೇಳೆ ಕರ್ನಾಟಕದಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’ ಕೂಡ ನಡೆಯಲಿದೆ!
ಅ.22 ಮತ್ತು 23ರಂದು ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಟೈಟಲ್​​ನಲ್ಲಿ ಫುಡ್​ ಫೆಸ್ಟಿವಲ್ ನಡೆಯಲಿದೆ. ಅಪ್ಪು ಅವರು ಈ ಹಿಂದೆ ಭೇಟಿ ಕೊಟ್ಟಿದ್ದ ಎಲ್ಲ ಹೋಟೆಲ್​ಗಳಲ್ಲೂ ಫುಡ್ ​ಫೆಸ್ಟಿವಲ್ ನಡೆಯುತ್ತಿದ್ದು, ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಜನರಿಗೆ ಅವಕಾಶವಿದೆ. ವೆಜ್ ಜತೆಗೆ ನಾನ್​ವೆಜ್​ ಊಟದ ವ್ಯವಸ್ಥೆಯೂ ಇರಲಿದೆ. ಅಪ್ಪುಗಾಗಿ ಹೋಟೆಲ್​​​​​ ಮಾಲೀಕರು ಫುಡ್​ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.
ಕರ್ನಾಟಕದಾದ್ಯಂತ ‘ಫುಡ್ ಫೆಸ್ಟಿವಲ್’ ಮಾಡುವ ಕನಸನ್ನು ಅಪ್ಪು ಕಂಡಿದ್ದರಂತೆ. ಅವರ ಕನಸನ್ನು ಈಗ ನನಸು ಮಾಡಲಾಗುತ್ತಿದೆ. ಆ್ಯಂಕರ್ ಅನುಶ್ರೀ, ನಟ ಧನಂಜಯ್ ಸೇರಿದಂತೆ ಹಲವು ನಟರು ಅಪ್ಪು ಭೇಟಿ ಮಾಡಿ ಭೋಜನ ಸವಿದಿದ್ದ ಹೋಟೆಲ್​ಗಳಿಗೆ ಭೇಟಿ ನೀಡಲಿದ್ದಾರಂತೆ.
PHOTOS| ರಮೇಶ್ ಯಕ್ಷಾವತಾರ! ನಟನ ಸಂಭ್ರಮಕ್ಕೆ ಪಾರವೇ ಇಲ್ಲ…

ಮಂಗಳೂರಲ್ಲಿ ಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಹಿಳಾ ಪಿಎಸ್​ಐ! ಸ್ಥಿತಿ ಗಂಭೀರ

ಬಸ್​ನಲ್ಲಿ ಚಿನ್ನ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆ: ಮಾನವೀಯತೆ ಮೆರೆದ ಮಧುಗಿರಿ ಡಿಪೋ ಕಂಡಕ್ಟರ್ ಶ್ರೀಧರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
