ಬೆಂಗಳೂರು:ನಟ ಪುನೀತ್​ ರಾಜ್​ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್​ ಚೆನ್ನೈನ ಸುತ್ತಮುತ್ತಲ ವೃದ್ಧಾಶ್ರಮಗಳಲ್ಲಿ ಅನ್ನದಾನ ಮಾಡಿದ್ದಾರೆ.
ಮಾ.17 ಅಪ್ಪು ಜನ್ಮದಿನ. ಇದೇ ದಿನ ಅವರ ಕೊನೇ ಚಿತ್ರ ಜೇಮ್ಸ್​ ಕೂಡ ವಿಶ್ವಾದ್ಯಂತ ತೆರೆಕಂಡಿದೆ. ಅಪ್ಪು ಇಲ್ಲದ ಮೊದಲ ವರ್ಷದ ಬರ್ತಡೇಯನ್ನು ಕೋಟ್ಯಂತರ ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಸಾಮಾಜಿಕ ಕಾಯ್ರಕಮ ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಇದೇ ರೀತಿ ನಟ ವಿಶಾಲ್​ ಕೂಡ ಅಪ್ಪು ನೆನಪಲ್ಲಿ 200ಕ್ಕೂ ಹೆಚ್ಚು ವೃದ್ಧರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.

ಅಪ್ಪು ಮೇಲೆ ವಿಶಾಲ್​ಗೆ ಇರುವ ಅಭಿಮಾನ ಕಂಡು ಕನ್ನಡಿಗರೂ ಖುಷಿಯಾಗಿದ್ದಾರೆ.

ಅಪ್ಪು ನಿಧನದ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ನಟ ವಿಶಾಲ್, ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಬ್ದಾರಿ ಹೊತ್ತುಕೊಳ್ಳಲು ಮುಂದೆ ಬಂದಿದ್ದರು. ಸದ್ಯಕ್ಕೆ ಸಹಾಯ ಬೇಡ, ಮುಂದೆ ನೋಡೋಣ ಎಂದು ನಟ ಶಿವರಾಜ್​ಕುಮಾರ್​ ಹೇಳಿದ್ದರು. ಶಕ್ತಿಧಾಮದ ಸಂಪೂರ್ಣ ಜವಬ್ದಾರಿಯನ್ನು ಶಿವಣ್ಣ ಹಾಗೂ ಗೀತಾ ಶಿವರಾಜ್​ಕುಮಾರ್​ ವಹಿಸಿಕೊಂಡಿದ್ದಾರೆ.
ಒಳ್ಳೇದಾಗ್ಲಿ ನನ್​​ ಕಂದನಿಗೆ… ಅಪ್ಪು‌ ಸಾವಿನ ಸುದ್ದಿ ಗೊತ್ತಿಲ್ದೆ ಬರ್ತ​ಡೇ, ಜೇಮ್ಸ್‌ಗೆ ಶುಭಕೋರಿದ‌ ಸೋದರತ್ತೆ

ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
