ಚಾಮರಾಜನಗರ:ಚಂದನವನದ ಯುವರತ್ನ, ನಟ ಪುನೀತ್​ ರಾಜ್​ಕುಮಾರ್ ಹುಟ್ಟುಹಬ್ಬ ಮತ್ತು ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು‌ ಒಂದೊಂದು ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಅಪ್ಪು ಅಭಿನಯದ ಎಲ್ಲ ಚಿತ್ರಗಳ ಕಟೌಟ್, ಜೇಮ್ಸ್ ಸಿನಿಮಾ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ಮುಖ್ಯರಸ್ತೆ, ಥಿಯೇಟರ್ ಉದ್ದಗಲಕ್ಕೂ ಅಪ್ಪು ಬ್ಯಾನರ್​ಗಳೇ ರಾರಾಜಿಸುತ್ತಿವೆ. ಡೊಳ್ಳು ಕುಣಿತದೊಂದಿಗೆ ಮೆರವಣಿ ನಡೆಸಲಾಗಿದೆ. ಮುಂದುವರಿದು ವೃತ್ತಿಯಲ್ಲಿ ಕ್ಷೌರಿಕನಾಗಿರುವ ಇಲ್ಲೊಬ್ಬ ಅಭಿಮಾನಿ ಅಪ್ಪು ಜನ್ಮದಿನ ಪ್ರಯುಕ್ತ ಉಚಿತವಾಗಿ ಜನರಿಗೆ ಹೇರ್ ಕಟಿಂಗ್, ಶೇವಿಂಗ್ ಸೇವೆ ನೀಡುತ್ತಿದ್ದಾರೆ.

ಅಪ್ಪು ಹುಟ್ಟುಹಬ್ಬದ ಅಂಗವಾಗಿ ಚಾಮರಾಜನಗರದ‌ ರಾಮಸಮುದ್ರದ ನ್ಯೂ ಲುಕ್ ಮೆನ್ಸ್‌ ಪಾರ್ಲರ್​ನ ಮಧು ಗ್ರಾಹಕರಿಗೆ ಉಚಿತ ಸೇವೆ ನೀಡಲಿದ್ದಾರೆ. ಇಂದು(ಗುರುವಾರ) ಬೆಳಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಅಂಗಡಿಗೆ ಬರುವವರ ಬಳಿ ಹಣ ಪಡೆಯದೆ ಹೇರ್ ಕಟಿಂಗ್, ಶೇವಿಂಗ್ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಜೇಮ್ಸ್ ಜಾತ್ರೆ: ಅಪ್ಪು ನೆನೆದು ಅಭಿಮಾನಿಗಳ ಕಣ್ಣೀರು, ನೆಲದ ಮೇಲೆಯೇ ಕುಳಿತು ಸಿನಿಮಾ ವೀಕ್ಷಣೆ

ತುಂಬಾ ದಪ್ಪಗಿದ್ದೀನಿ, ಕ್ಷಮಿಸಿ ಪಪ್ಪಾ… ತಂದೆ ಮೊಬೈಲ್​ಗೆ ಸಂದೇಶ ರವಾನೆ: ಬೆಳಗಾಗುವಷ್ಟರಲ್ಲಿ ನಡೆದೇಹೋಯ್ತು ದುರಂತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
