ಆನೇಕಲ್​:ಇತ್ತೀಚೆಗೆ ಆನ್​ಲೈನ್​ ವಹಿವಾಟು ಹೆಚ್ಚಾಗುತ್ತಿರುವಂತೆ ಹಣ ಪಾವತಿ ನೆಪದಲ್ಲಿ ವಂಚಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗೂಗಲ್​ಪೇ ಮೂಲಕ ಹಣ ಪಾವತಿ ನೆಪದಲ್ಲಿ ವಂಚಕನೊಬ್ಬ ಬಟ್ಟೆ ಅಂಗಡಿ ಹಾಗೂ ಹಾರ್ಡ್​ವೇರ್​ ಅಂಗಡಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಜತೆಗೆ ಅಂಗಡಿ ಮಾಲೀಕರ ಮೊಬೈಲ್​ ಫೋನ್​ಗಳನ್ನೂ ಕದ್ದೊಯ್ದಿದ್ದಾನೆ. ಈತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆನೇಕಲ್​ನ ಅಂಬೇಡ್ಕರ್​ ವೃತ್ತದ ಬಳಿಯ ತುಳಸಿ ಕಲೆಕ್ಷನ್​ ಎಂಬ ಬಟ್ಟೆ ಅಂಗಡಿಗೆ ನಾಲ್ಕು ದಿನಗಳ ಹಿಂದೆ ಕರೆ ಮಾಡಿದ್ದ ವಂಚಕನೊಬ್ಬ, ಕ್ಯೂಆರ್​ ಕೋಡ್​ ಬಳಸಿ ಭಾರತ್​ಪೇ ಆ್ಯಪ್​ ಮೂಲಕ ಹಣ ಪಡೆಯುವ ವ್ಯವಸ್ಥೆ ಅಳವಡಿಸಿಕೊಡುವುದಾಗಿ ಹೇಳಿದ್ದ. ಅದರಂತೆ ಸ್ಥಳಕ್ಕೆ ಬಂದ ಯುವಕನೊಬ್ಬ ಕ್ಯೂಆರ್​ ಕೋಡ್​ ಮತ್ತು ಫೋನ್​ಪೇ ಆ್ಯಪ್​ ಅಪ್​ಡೇಟ್​ ಮಾಡಿಕೊಡುವುದಾಗಿ ನಂಬಿಸಿ, ಮಾಲೀಕರ ಅಕೌಂಟ್​ನಲ್ಲಿದ್ದ 56 ಸಾವಿರ ರೂ. ಎಗರಿಸಿದ್ದಾನೆ. ಬಳಿಕ ಇದೇ ರಸ್ತೆಯಲ್ಲಿರುವ ಸೂರ್ಯ ಹಾರ್ಡ್​ವೇರ್​ ಎಂಬ ಅಂಗಡಿ ಮಾಲೀಕರ ಬಳಿಗೆ ಹೋಗಿ ಅವರ ಮೊಬೈಲ್​ಫೋನ್​ ಪಡೆದು 36 ಸಾವಿರ ರೂ. ಎಗರಿಸಿದ್ದಾನೆ. ಜತೆಗೆ ಮೊಬೈಲ್ ಅನ್ನೂ ದೋಚಿದ್ದಾನೆ.
ವಂಚನೆ ಕುರಿತು ದೂರು ಕೊಡಲು ಎರಡೂ ಅಂಗಡಿಗಳ ಮಾಲೀಕರು ಆನೇಕಲ್​ ಠಾಣೆಗೆ ಹೋದಾಗ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟಿದ್ದಾರೆ. ಇದರಿಂದಾಗಿ ಮಾಲೀಕರು ಹಣ ಕಳೆದುಕೊಂಡು ಅಸಹಾಯಕರಾಗಿದ್ದಾರೆ.
ಇಂದಿನಿಂದ 3 ದಿನ ಕರ್ನಾಟಕದ ಹಲವೆಡೆ ಮಳೆ! ತಮಿಳುನಾಡು, ಕೇರಳದಲ್ಲೂ ಮಳೆ

ಇಂದಿನಿಂದ 5 ದಿನ ವಿವಿಧ ರೈಲುಗಳ ಸಂಚಾರ ರದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
