ಧಾರವಾಡ:ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾ ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ ‘ರಾ.. ರಾ.. ರಕ್ಕಮ್ಮ…’ ಹಾಡಿನ ಫೀವರ್​ ಕೂಡ ಜೋರಾಗಿದೆ. ರಾ ರಾ ರಕ್ಕಮ್ಮ… ಹಾಡು ಕಿವಿಗೆ ಬೀಳುತ್ತಿದ್ದಂತೆ ಅಭಿಮಾನಿಗಳು ನಿಂತಲ್ಲೇ ಹೆಜ್ಜೆ ಹಾಕಿ ಬಿಡ್ತಾರೆ. ಬಹುತೇಕ ಪುಟ್ಟ ಮಕ್ಕಳಿಗೂ ಈ ಸಾಂಗ್​ ಅಂದ್ರೆ ಅಚ್ಚುಮೆಚ್ಚು. ಸೆಲೆಬ್ರಿಟಿಗಳೂ ಕೂಡ ರಾ ರಾ ರಕ್ಕಮ್ಮ… ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಸುದ್ದಿಯಾಗ್ತಿದ್ದಾರೆ. ಅದೇ ರೀತಿ ಈ ಹಾಡಿಗೆ ಡ್ಯಾನ್ಸ್​ ಮಾಡಿ ಗಮನ ಸೆಳೆದಿದ್ದ ಪೌರಕಾರ್ಮಿಕರಿಗೆ ಇದೀಗ ಉದ್ಯೋಗ ಖಾಯಂ ಆಗಿದೆ!
ಹೌದು, ಈ ಪೌರ ಕಾರ್ಮಿಕರು ನಗರ ಸ್ವಚ್ಛತೆಗೂ ಸೈ.. ಡ್ಯಾನ್ಸ್ ಮಾಡೋಕು ಸೈ… ಧಾರವಾಡದಲ್ಲಿ ತಮ್ಮ ಹಣದಿಂದಲೇ ವಿಶೇಷ ಸೆಟ್​ ಹಾಕಿ ‘ರಾ.. ರಾ.. ರಕ್ಕಮ್ಮ…’ ಭರ್ಜರಿ ಡ್ಯಾನ್ಸ್​ ಮಾಡುವ ಮೂಲಕ ಕಿಚ್ಚ ಸುದೀಪ್​ಗೆ ಪೌರ ಕಾರ್ಮಿಕರು ವಿಶ್​ ಮಾಡಿದ್ದರು. ಈ ವಿಡಿಯೋವನ್ನು ದಿಗ್ವಿಜಯ ನ್ಯೂಸ್​ ಪ್ರಸಾರ ಮಾಡಿತ್ತು. ಈ ವೇಳೆ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಪೌರ ಕಾರ್ಮಿಕ ಪ್ರಶಾಂತ್​ ಶಿಕ್ಕಲಗಾರ್ ತಂಡ, ನಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ನಮಗೆ ಎಲ್ಲೂ ಅವಕಾಶ ಸಿಗಲಿಲ್ಲ. ಸುದೀಪ್​ ಅಣ್ಣನ ದೊಡ್ಡ ಅಭಿಮಾನಿಗಳು ನಾವು. 30-35 ಸಾವಿರ ರೂ. ಖರ್ಚು ಮಾಡಿ ಸೆಟ್​ ಹಾಕಿಸಿ ಡ್ಯಾನ್ಸ್​ ಮಾಡಿದ್ದೇವೆ. ವಿಕ್ರಾಂತ್​ ರೋಣ ದಾಖಲೆ ಬರೆಯಬೇಕು. ಅದಕ್ಕಾಗಿಯೇ ಡ್ಯಾನ್ಸ್​ ಮೂಲಕ ಶುಭ ಕೋರಿದ್ದೇವೆ. ಸುದೀಪ್​ ಅಣ್ಣ ಅವರನ್ನು ಭೇಟಿ ಮಾಡಬೇಕು. ನಮ್ಮ ಡ್ಯಾನ್ಸ್​ ಅನ್ನು ತೋರಿಸಬೇಕು ಎಂದಿದ್ದರು. ಒಂದು ಶಾಲೆಯಲ್ಲಿ ಚಿಕ್ಕಮಕ್ಕಳಿಗೆ ಡ್ಯಾನ್ಸ್​ ಕಲಿಸುತ್ತಿದ್ದೇನೆ. ನಮ್ಮ ತಂದೆ-ಅಜ್ಜಿ ಎಲ್ಲರೂ ತೀರಿಕೊಂಡಿದ್ದಾರೆ. ಸುದೀಪ್​ ಅಣ್ಣ ಅವರನ್ನು ಭೇಟಿ ಮಾಡಬೇಕು ಪ್ರಶಾಂತ್​ ಶಿಕ್ಕಲಗಾರ್ ತನ್ನ ಮನದ ಆಸೆಯನ್ನ ಹೇಳಿಕೊಂಡಿದ್ದರು.
ಪೌರಕಾರ್ಮಿಕರ ಡ್ಯಾನ್ಸ್​ ಬಗ್ಗೆ ತಿಳಿಯುತ್ತಿದ್ದಂತೆ ಅವರನ್ನೆಲ್ಲಾ ಸುದೀಪ್ ಅವರು ತಮ್ಮ ಮನೆಗೆ ಕರೆಸಿಕೊಂಡು ಸಿಹಿ ಕೊಟ್ಟು ಉಪಚರಿಸಿದ್ದರು. ತಮ್ಮ ನೆಚ್ಚಿನ ಕಿಚ್ಚನನ್ನು ನೋಡಿ ಭಾವುಕರಾದ ಧಾರವಾಡದ ಪೌರ ಕಾರ್ಮಿಕರು, ದಿಗ್ವಿಜಯ ನ್ಯೂಸ್​ಗೆ ಧನ್ಯವಾದ ಅರ್ಪಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಧಾರವಾಡದ ಜಿಲ್ಲಾಧಿಕಾರಿಗಳಿಂದ ಆ ಪೌರ ಕಾರ್ಮಿಕರಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಪೌರ ಕಾರ್ಮಿಕರ ಪ್ರತಿಭೆ ನೋಡಿ ತನ್ನ ಕಚೇರಿಗೆ ಕರೆಸಿಕೊಂಡ ಧಾರವಾಡದ ಜಿಲ್ಲಾಧಿಕಾರಿಗಳು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದ ಪೌರ ಕಾರ್ಮಿಕರ ಕೆಲಸವನ್ನು ಖಾಯಂ ಮಾಡುವಂತೆ ಆದೇಶಿಸಿದ್ದಾರೆ. ಉದ್ಯೋಗದ ಅಭದ್ರತೆಯಲ್ಲಿದ್ದ ಪೌರ ಕಾರ್ಮಿಕರಿಗೆ ರಾ.. ರಾ.. ರಕ್ಕಮ್ಮ… ಡ್ಯಾನ್ಸ್​ ವರವಾಗಿ ಪರಿಣಮಿಸಿದೆ.
ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
