ಬೆಂಗಳೂರು:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು. ಮೊದಲಿಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ರಾಹುಲ್​ ಗಾಂಧಿ, ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ದರ್ಶನ ಪಡೆಯಲಿದ್ದಾರೆ.
ಬೆಂಗಳೂರಿನ ವಿಮಾಣ ನಿಲ್ದಾಣಕ್ಕೆ ಬಂದಿಳಿದ ರಾಹುಲ್​ ಗಾಂಧಿ ಅವರನ್ನ ಡಿ.ಕೆ.ಶಿಕುಮಾರ್​ ಮತ್ತು ಸಿದ್ದರಾಮಯ್ಯ ಸ್ವಾಗತಿಸಿದರು. ತುಮಕೂರಿಗೆ ಪ್ರಯಾಣ ಬೆಳಸಿದ ಬಳಿಕ ಬೆಂಗಳೂರಿಗೆ ಹಿಂದಿರುಗಿ ಬಿಬಿಎಂಪಿ ಚುನಾವಣೆ ಸಂಬಂಧ ಪ್ರಮುಖ ನಾಯಕರು, ಬೆಂಗಳೂರು ಭಾಗದ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಏ.1ರ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ, ಅಂದು ಮಧ್ಯಾಹ್ನ 2ರಿಂದ 3.20ರವರೆಗೆ ಮುಂಚೂಣಿ ಘಟಕದೊಂದಿಗೆ ಸಮಾಲೋಚನೆ, ಪ್ರತ್ಯೇಕವಾಗಿ ವಿವಿಧ ಘಟಕಗಳ ಜವಾಬ್ದಾರಿ ವಿವರಣೆ ಪಡೆಯಲಿದ್ದಾರೆ. ಇದಿಷ್ಟು ಪೂರ್ವ ನಿಗದಿತ ಕಾರ್ಯಕ್ರಮ.
ಇದನ್ನು ಹೊರತುಪಡಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಕಾರ್ಯಾಧ್ಯಕ್ಷರ ಜತೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಏ.1ರ ಮಧ್ಯಾಹ್ನ 3.30ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯಕ್ಕೆ ಆಗಮಿಸಿರುವ ರಾಹುಲ್​ ಗಾಂಧಿ ಅವರಿಗೆ ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಇತ್ತೀಚಿನ ಹೋರಾಟದ ವರದಿ ಒಪ್ಪಿಸಲು ಕೆಪಿಸಿಸಿ ಸಿದ್ಧಪಡಿಸಿಕೊಂಡಿದೆ. ಪ್ರಮುಖವಾಗಿ ಮೇಕೆದಾಟು ಪಾದಯಾತ್ರೆ ವರದಿ ಇದೆ. ಇದನ್ನು ರಾಹುಲ್​ ಗಾಂಧಿ ಮುಂದಿಡಲಾಗುತ್ತದೆ. ಇದನ್ನು ಹೊರತುಪಡಿಸಿ ಸದಸ್ಯತ್ವ ಅಭಿಯಾನದ ವರದಿ ಇಡಲಾಗುತ್ತದೆ. ಇಷ್ಟೇ ಅಲ್ಲದೆ ಮುಂಬರುವ ಚುನಾವಣೆಗೆ ನಡೆದಿರುವ ಪೂರ್ವ ತಯಾರಿ, ಪಾಂತರ ಮಾಡುವವರ ಬಗ್ಗೆ, ಮುಂದೆ ಕೈಗೊಳ್ಳಲಾಗುವ ಹೋರಾಟದ ಬಗ್ಗೆ ಯೋಜನೆಯನ್ನು ರಾಹುಲ್​ ಗಮನಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ.
Koo App
ತ್ರಿವಿಧ ದಾಸೋಹಿ, ಶತಮಾನದ ಸಂತ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಯವರ 115ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಎಐಸಿಸಿ ವರಿಷ್ಠರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಹಾರ್ದಿಕ ಸುಸ್ವಾಗತ.
–ಕರ್ನಾಟಕ ಕಾಂಗ್ರೆಸ್ (@inckarnataka)31 Mar 2022

ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರು ಸುರಕ್ಷಿತವಾಗಿದ್ದಾರೆ, ಭಯ ಪಡಬೇಡಿ: ಶ್ರೀಶೈಲ ಜಗದ್ಗುರುಗಳು

ಹಲಾಲ್​ ದಂಗಲ್​: ಸಿಎಂ ಬೊಮ್ಮಾಯಿಗೆ ಗಂಡಸ್ತನದ ಸವಾಲ್ ಹಾಕಿದ ಎಚ್‌ಡಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
