ರಾಯಚೂರು:ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿದ್ದಂತೆ ಹಿಜಾಬ್​ ತೆಗೆದಿಟ್ಟು ತರಗತಿಯೊಳಗೆ ಕೋವಿಡ್​ ನಿಯಮ ಪಾಲಿಸುತ್ತಾ ಕುಳಿತರು. ಆದರೆ, ಇಲ್ಲಿನ ಶಿಕ್ಷಕಿಯರು ಮಾತ್ರ ಬುರ್ಕಾ-ಹಿಜಾಬ್​ ಧರಸಿಕೊಂಡೇ ಮಕ್ಕಳಿಗೆ ಪಾಠ ಮಾಡಿದ್ದಾರೆ. ಇಂತಹ ಘಟನೆ ರಾಯಚೂರು ನಗರದ ಪೋರ್ಟ್ ಪ್ರೌಢಶಾಲೆಯಲ್ಲಿ ಸೋಮವಾರ ಸಂಭವಿಸಿದೆ.
ಹಿಜಾಬ್ ತೆಗೆದು ಪಾಠ ಕೇಳಲು ತರಗತಿಗಳಲ್ಲಿ ಕುಳಿತ ಮಕ್ಕಳು, ಕೊವೀಡ್ ನಿಯಮವನ್ನೂ ಪಾಲಿಸುವ ಮೂಲಕ ಮಾಸ್ಕ್ ಧರಿಸಿದ್ದರು. ಹೈಕೋರ್ಟ್​ನ​ ಆದೇಶ ಪಾಲಿಸುವ ಮೂಲಕ ಈ ಮಕ್ಕಳೂ ರಾಜ್ಯದ ಎಲ್ಲ ಶಾಲೆಗೂ ಮಾದರಿ ಎನ್ನಿಸಿದರು. ಆದರೆ, ಶಿಕ್ಷಕಿಯರು ಮಾತ್ರ ಹಿಜಾಬ್​ ತೆಗೆಯಲೇ ಇಲ್ಲ.

ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್​, ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್‌ ಪೂರ್ಣಪೀಠ ಮಧ್ಯಂತರ ಆದೇಶ ನೀಡಿದ್ದರೂ ಶಿಕ್ಷಕಿಯರು ಕ್ಯಾರೆ ಎಂದಿಲ್ಲ.

ರಾಜ್ಯದೆಲ್ಲಡೆ ಇಂದು ಬಹುತೇಕ ಶಾಲೆಗಳಿಗೆ ಹಿಜಾಬ್​ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಬಂದಿದ್ದರು. ಕೆಲವೆಡೆ ಮಕ್ಕಳಿಗೆ ತಿಳಿಹೇಳಿ ಹಿಜಾಬ್​ ತೆಗೆಸಿ ಶಾಲೆ ಪ್ರವೇಶಕ್ಕೆ ಅನುವು ಮಾಡಿಕೊಡುವಲ್ಲಿ ಆಡಳಿತ ಮಂಡಳಿ ಹರಸಾಹಸಪಟ್ಟಿದೆ. ಕೆಲ ಮಕ್ಕಳು ಹಿಜಾಬ್​ ತೆಗೆಯಲು ಒಪ್ಪದೆ ವಾಪಸ್​ ಮನೆಗೆ ಹೋಗಿದ್ದಾರೆ, ಕೆಲ ಮಕ್ಕಳು ಹಿಜಾಬ್​ ಧರಿಸಿಯೇ ತರಗತಿಗೆ ಹೋಗಿದ್ದಾರೆ.
ಶಾಲೆಗಳಿಗೆ ಶಿಕ್ಷಕಿಯರೇ ಹಿಜಾಬ್​ ಧರಿಸಿ ಬಂದ್ರು! ಮಂಡ್ಯ, ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ಘಟನೆ

ಸಾವಲ್ಲೂ ಸಾರ್ಥಕತೆ ಮೆರೆದ ಚೈತ್ರಾಗಿತ್ತು ಮಹತ್ತರ ಆಸೆ, ಆಕೆ ಬದುಕಿದ್ದರೆ ಸಂಚಲನ ಸೃಷ್ಟಿಸುತ್ತಿದ್ದಳು…

ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
