ಗದಗ:ಚಿನ್ನ ಬಿಡಿ, ರಸ್ತೆಯಲ್ಲಿ ಒಂದು ನೋಟು ಸಿಕ್ಕರೂ ಅತ್ತಿತ್ತ ನೋಡಿ ಜೇಬಿಗಿಳಿಸಿಕೊಳ್ಳುವವರೂ ಇರುವಾಗ, ಇಲ್ಲೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲವನ್ನೇ ಕಳೆದುಕೊಂಡವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗದಗ ನಿವಾಸಿ ಮೆಹಬೂಬ್​ ಕರ್ನಾಜಿ ಎಂಬುವವರು ಇಂಥದ್ದೊಂದು ಕೆಲಸ ಮಾಡಿ ಪ್ರಾಮಾಣಿಕತೆ ಮೆರೆದಿದ್ದಷ್ಟೇ ಅಲ್ಲ, ಈ ಮೂಲಕ ಬ್ಯಾಗ್ ಕಳೆದುಕೊಂಡಿದ್ದವರ ಹಾರೈಕೆಗೂ, ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ವಿಜಯಪುರ ಜಿಲ್ಲೆಯ ಚನ್ನಬಸಪ್ಪ ಇಂಡಿ ಎನ್ನುವವರು ಗದಗ-ಮುಂಬೈ ರೈಲಿನಲ್ಲಿ ಪ್ರಯಾಣಿಸುವಾಗ ಬ್ಯಾಗ್ ಮಿಸ್​ ಮಾಡಿಕೊಂಡಿದ್ದರು. ಆದರೆ ಅದೇ ಬ್ಯಾಗ್​ ರೈಲು ಪ್ರಯಾಣಿಕ ಮೆಹಬೂಬ್ ಕರ್ನಾಜಿ ಅವರ ಕಣ್ಣಿಗೆ ಕಾಣಿಸಿದ್ದು, ಅವರು ಅದನ್ನು ಗದಗ ರೈಲ್ವೆ ಪೊಲೀಸರಿಗೆ ನೀಡಿದ್ದರು.
ಪೊಲೀಸರು ಬ್ಯಾಗ್​ ಪರಿಶೀಲನೆ ನಡೆಸಿದಾಗ ಅದರಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 300 ಗ್ರಾಂ ತೂಕದ ಚಿನ್ನಾಭರಣ ಕಂಡುಬಂದಿದ್ದವು. ಕೂಡಲೇ ಗದಗ ರೈಲ್ವೆ ಸರ್ಕಲ್ ಪೊಲೀಸ್ ಇನ್​ಸ್ಪೆಕ್ಟರ್ ಡಿ.ಬಿ. ಪಾಟೀಲ್​ ನೇತೃತ್ವದ ರೈಲ್ವೆ ಪೊಲೀಸರ ತಂಡ, ಆ ಚಿನ್ನಾಭರಣದ ಮಾಲೀಕರ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಬಳಿಕ ಚನ್ನಬಸಪ್ಪ ಇಂಡಿ ಅವರನ್ನು ಪತ್ತೆ ಮಾಡಿ, ಅವರಿಗೆ ಚಿನ್ನಾಭರಣವನ್ನು ಪೊಲೀಸರು ತಲುಪಿಸಿದ್ದಾರೆ. ಪ್ರಾಮಾಣಿಕ ರೈಲ್ವೆ ಪ್ರಯಾಣಿಕ ಮೆಹಬೂಬ್​ ಹಾಗೂ ಗದಗ ಪೊಲೀಸರಿಗೆ ಚನ್ನಬಸಪ್ಪ ದಂಪತಿ ಧನ್ಯವಾದ ತಿಳಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ; ಕುಡಿದ ಮತ್ತಿನಲ್ಲಿ ನಡೆದೇ ಹೋಯ್ತು ಕೊಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
