ಬಾಗಲಕೋಟೆ:ಹೃದಯಾಘಾತದಿಂದ ನಿನ್ನೆ (ಸೋಮವಾರ) ಮೃತಪಟ್ಟಿದ್ದ ರೈಲ್ವೆ ಟಿಕೆಟ್ ಕಲೆಕ್ಟರ್​ಗೆ ಇಂದು ಕರೊನಾ ಪಾಸಿಟಿವ್​ ಧೃಡಪಟ್ಟಿದೆ. ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುವ ಮುನ್ನವೇ ಅನೇಕರು ಮೃತನ ಅಂತಿಮ ದರ್ಶನ ಪಡೆದಿದ್ದು, ಆತಂಕ ಮನೆಮಾಡಿದೆ.
ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ 57 ವರ್ಷದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದರು. ಹುಬ್ಬಳ್ಳಿ ಮೀರಜ್ ಮಾರ್ಗದ ರೈಲು ಟಿಕೆಟ್ ಕಲೆಕ್ಟರ್ ಆಗಿದ್ದ ಇವರು ಮೂರು ದಿನದ ಹಿಂದೆ ಮೀರಜ್​ನಿಂದ ಬಂದಿದ್ದರು. ಇವರು ಮೃತಪಟ್ಟ ಬಳಿಕ ಗಂಟಲು ಮಾದರಿಯನ್ನು ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದ್ದು, ಕರೊನಾ ಪಾಸಿಟಿವ್​ ಬಂದಿದೆ. ಮತ್ತೊಮ್ಮೆ ವರದಿ ಖಚಿತತೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ಕಳಿಸಿದ್ದಾರೆ.ಇದನ್ನೂ ಓದಿರಿಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?
ಸದ್ಯ ಚಿಕ್ಕ ಮ್ಯಾಗೇರಿ ಗ್ರಾಮವನ್ನು ಸೀಲ್​ಡೌನ್ ಮಾಡಲಾಗಿದೆ. ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಮೃತರ ಅಂತಿಮ ದರ್ಶನ ಪಡೆಯಲು ಎಷ್ಟು ಜನರು ಭಾಗವಹಿಸಿದ್ದರು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಮೃತನು ಮಹಾರಾಷ್ಟ್ರದಿಂದ ಬಂದಿದ್ದ ಬಗ್ಗೆ ಆತನ ಸಾವಿನ ಬಳಿಕ ಸ್ಥಳೀಯರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮದುವೆ ಆಗದೆ ವಂಚಿಸಿದ ಪ್ರಿಯಕರನ ವಿರುದ್ಧ 6 ತಿಂಗಳ ಗರ್ಭಿಣಿ ಹೋರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
