ಬೆಂಗಳೂರು:ಮಂಗಳವಾರ ರಾತ್ರಿ ಸುರಿದ ಮಹಾಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಬುಧವಾರವೂ ಅಬ್ಬರಿಸಿದ ವರುಣ, ಇಂದು ಬೆಳ್ಳಂಬೆಳಗ್ಗೆಯೂ ಅಬ್ಬರಿಸುತ್ತಿದ್ದು, ಜನಜೀವನ ಮೂರಾಬಟ್ಟೆಯಾಗಿದೆ. ಸಾವಿರಾರು ಮನೆಗಳಿಗೆ ಮಳೆ ನೀರಿನ ಜತೆಗೆ ಕೊಳಚೆ ನೀರೂ ನುಗ್ಗಿದೆ, ತಗ್ಗುಪ್ರದೇಶದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಮಳೆ ಹಾನಿ ವೀಕ್ಷಿಸಲು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇಂದು ಬೆಳಗ್ಗೆ ಸಿಟಿ ರೌಂಡ್ಸ್​ ಮಾಡುತ್ತಿದ್ದಾರೆ.
ಸಿಎಂ ನಿವಾಸದಿಂದ ಅಧಿಕಾರಿಗಳ ಜತೆ ವೋಲ್ವೋ ಬಸ್​ ಹತ್ತಿದ ಬೊಮ್ಮಾಯಿ ಅವರು ಮಹಾಲಕ್ಷ್ಮೀ ಲೇಔಟ್​ ತೆರಳಿದರು. ಮಹಾಲಕ್ಷ್ಮಿ ಲೇಔಟ್, ಜೆಸಿ ನಗರ 60 ಅಡಿ ರಸ್ತೆಗೆ ಸಿಎಂ ಭೇಟಿ ನೀಡಿದರು. ಈ ವೇಳೆ ಸಚಿವರಾದ ಗೋಪಾಲಯ್ಯ, ಆರ್. ಅಶೋಕ್, ಸೋಮಣ್ಣ ಸಾಥ್​ ನೀಡಿದರು. ರಾಜಕಾಲುವೆ ಅತಿಕ್ರಮಣವಾಗಿ ಮನೆಯೊಳಗೆ ನೀರು ನುಗ್ಗಿದೆ. ಅಂತಹ ಮನೆಗಳನ್ನು ಸಿಎಂ ಪರಿಶೀಲಿಸಿದರು. ಕಮಲಾನಗರ ಮುಖ್ಯ ರಸ್ತೆಯತ್ತ ಹೊರಟಿದ್ದಾರೆ. ಒಂದು ಕಡೆ ಮಳೆ, ಮತ್ತೊಂದು ಕಡೆ ಸಿಎಂ ಸಿಟಿ ರೌಂಡ್ಸ್​ ಪರಿಣಾಮ ಟ್ರಾಫಿಕ್​ ಜಾಮ್​ ಹೆಚ್ಚಾಗಿದೆ.
ರಾಜ್ಯದಲ್ಲಿ ಧಾರಾಕಾರ ಮಳೆ: ಕೆಲವೆಡೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಫ್ಯಾಟ್​ ಬರ್ನ್​ ಸರ್ಜರಿ ಪ್ರಾಣಕ್ಕೆ ಕುತ್ತು ತರುತ್ತಾ? ನಟಿ ಚೇತನಾ ಸಾವಿನ ಬೆನ್ನಲ್ಲೇ ಮಹತ್ವದ ವಿಚಾರ ತಿಳಿಸಿದ ವೈದ್ಯರು

PSI ಹುದ್ದೆ ಅಕ್ರಮ: ಮೊದಲ ರಾತ್ರಿಯ ಖುಷಿಯಲ್ಲಿದ್ದವನಿಗೆ ಶಾಕ್ ಕೊಟ್ಟ ಸಿಐಡಿ​! ದೇವಸ್ಥಾನದಲ್ಲೇ ನವವಿವಾಹಿತ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − seven =
Remember me
