ಉತ್ತರಕನ್ನಡ:ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮನೆ ಗೋಡೆ ಕುಸಿದು ಮಲಗಿದ್ದಲ್ಲೇ ತಾಯಿ-ಮಗಳು ಮೃತಪಟ್ಟ ಘಟನೆ ಮಂಗಳವಾರ ಬೆಳಗಿನಜಾವ ಸಂಭವಿಸಿದೆ.
ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ರುಕ್ಮಿಣಿ ವಿಠ್ಠಲ್ ಮಾಚಕ(37) ಮತ್ತು ಇವರ ಪುತ್ರಿ ಶ್ರೀದೇವಿ ವಿಠ್ಠಲ್ ಮಾಚಕ(13) ಮೃತ ದುರ್ದೈವಿಗಳು. ನಿರಂತರ ಮಳೆಗೆ ಇವರು ವಾಸವಿದ್ದ ಮಣ್ಣಿನ ಮನೆಯ ಗೋಡೆ ಕುಸಿದಿದೆ. ಪರಿಣಾಮ ಮಲಗಿದ್ದಲ್ಲೇ ಅಮ್ಮ-ಮಗಳು ಶವವಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ್​ ಪ್ರಕಾಶ ಗಾಯಕವಾಡ, ತಾಪಂ ಇಒ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಳೆ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ:ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಮತ್ತು ಬುಧವಾರ ಪ್ರವಾಸ ಕೈಗೊಳ್ಳಲಿದ್ದಾರೆ. ಕಳೆದ ಹತ್ತು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಿ ತೀವ್ರ ಹಾನಿಯಾಗಿದೆ. ಹಾನಿಗೊಳಗಾದ ಪ್ರದೇಶಗಳ ಖುದ್ದು ವೀಕ್ಷಣೆ ಮಾಡಿ ಜಿಲ್ಲಾಡಳಿತದ ಜತೆಗೆ ಸಿಎಂ ಸಭೆ ನಡೆಸಲಿದ್ದಾರೆ.
ಕೆಲ್ಸ ಕೊಡಿಸುವುದಾಗಿ 150 ಜನರಿಂದ ಹಣ ಪೀಕಿದ ಮಾಜಿ ಪೊಲೀಸ್​-ಪತ್ನಿ! ಮನೆ ಹೆಸರಲ್ಲೂ ಮಹಾ ಮೋಸ

ತವರು ಜಿಲ್ಲೆ ತುಮಕೂರಿಗೆ ಆಗಮಿಸಿದ ಕೆನಡಾ ಸಂಸದ ಚಂದ್ರ ಆರ್ಯ: ಹುಟ್ಟೂರಲ್ಲಿ ಗ್ರಾಮಸ್ಥರ ಜತೆ ಮಾತುಕತೆ

33 ವರ್ಷದ ಪುರುಷನಿಗೂ ಪಿರಿಯಡ್ಸ್​! ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಆಘಾತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
