ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಿರಂತರ ಮಳೆಗೆ ಮತ್ತೊಂದು ಪಾರಂಪರಿಕ ಕಟ್ಟಡ ಕುಸಿದಿದೆ.
ಇತ್ತೀಚಿಗೆ ಮೈಸೂರು ಅರಮನೆ ಕೋಟೆಯ ಗೋಡೆ ಕುಸಿದಿತ್ತು. ಇದೀಗ ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಕುಸಿದಿದೆ. ಪ್ರಾಂಶುಪಾಲರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಶುಕ್ರವಾರ ಬೆಳಗ್ಗೆ 10.30ಕ್ಕೆ ಕಟ್ಟಡ ಕುಸಿದಿದೆ. ಕುಸಿಯುವ 5 ನಿಮಿಷ ಮೊದಲೇ ನಾನು ಕಟ್ಟಡ ವೀಕ್ಷಣೆ ಮಾಡಿದ್ದೆ. ಮಳೆ ನೀರು ಸೋರುವ ಕಾರಣಕ್ಕೆ‌ ಲ್ಯಾಬ್ ಎಲೆಕ್ಟ್ರಿಕ್ ಕನೆಕ್ಷನ್ ಕಟ್ ಮಾಡಿಸಲಾಗಿತ್ತು. ಲ್ಯಾಬ್‌ಗೆ ಯಾರೂ ಬಾರದಂತೆ ಹೇಳಿ ಬೀಗ ಹಾಕಿಸಲಾಗಿತ್ತು. ಅದಾದ 5 ನಿಮಿಷದಲ್ಲೇ ಕಟ್ಟಡ ಕುಸಿದು ಬಿದ್ದಿದೆ. ಮೂರು ಕೊಠಡಿ ಒಳಗೊಂಡಂತೆ ಸಂಪೂರ್ಣ ನೆಲಸಮ ಆಗಿದೆ ಎಂದು ಪ್ರಾಂಶುಪಾಲ ರವಿದಿಗ್ವಿಜಯ ನ್ಯೂಸ್​ಗೆ ವಿವರಿಸಿದರು.
ಕಾಲೇಜಿನ ಕಟ್ಟಡ ಜೀರ್ಣೋದ್ಧಾರ ನಡೆಯಬೇಕಿತ್ತು. ಅದಕ್ಕಾಗಿ 2 ಕೋಟಿ ಹಣ ಕೂಡ ಬಿಡುಗಡೆ ಆಗಿತ್ತು. ಇದು ಪಾರಂಪರಿಕ ಕಟ್ಟಡವಾಗಿದ್ದು, ಮರು ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ತೀರ್ಮಾನ ಮಾಡಬೇಕಿದೆ. ಸದ್ಯಕ್ಕೆ‌ ಎರಡು ದಿನ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಪೋಷಕರು ಆತಂಕ ಪಡುವಂತಿಲ್ಲ. ಹೊಸ ಕಟ್ಟಡದಲ್ಲಿ ತರಗತಿ ಆರಂಭ ಮಾಡುತ್ತೇವೆ ಎಂದು ರವಿ ತಿಳಿಸಿದರು.
ಸಮ್ಮಿಶ್ರ ಸರ್ಕಾರ ಬಂದ್ರೆ ನಾನು ಸಿಎಂ ಆಗಲ್ಲ… ಚಾಮುಂಡಿ ಸನ್ನಿಧಿಯಲ್ಲೇ ಘೋಷಿಸಿ ಎಚ್​ಡಿಕೆ ಕೊಟ್ಟ ಕಾರಣ ಹೀಗಿದೆ…

ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ: ಬೆಂಗಳೂರಲ್ಲಿ ಸಬ್​ಇನ್​ಸ್ಪೆಕ್ಟರ್​ ಬಂಧನ

https://www.vijayavani.net/agtd-announced-the-first-list-of-jds-candidates-in-chamundi-hills/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
