ಬೆಂಗಳೂರು:ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆಂದು ತೆರಳಿದ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರಿಗೆ ದಂಪತಿ ಶಾಕ್​ ಕೊಟ್ಟಿದ್ದಾರೆ. ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಸಿಎಂ ಸಾಹೇಬ್ರು ಸ್ಥಳಕ್ಕೆ ಬರಬೇಕು. ಯಾವುದೇ ಕಾರಣಕ್ಕೂ ನಮ್ಮ ಮನೆಯನ್ನ ಒಡೆಯಬಾರದು ಎಂದು ಕೂಗಾಡಿದ್ದಾರೆ.
ಕೆ.ಆರ್​.ಪುರದ ಗಾಯತ್ರಿ ನಗರದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ‘ನಮ್ಮ ಮನೆ ಮೇಲೆ 40 ಲಕ್ಷ ರೂಪಾಯಿ ಸಾಲ ಇದೆ. ಆಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು? ನಮ್ಮ ಮನೆಯನ್ನ ಒಡೆದರೆ ನಾವು ಆತ್ಮಹತ್ಯೆ ಮಾಡ್ಕೋತೀವಿ. ಸಿಎಂ ಸರ್​ನ ಕರೀರಿ… ನಮಗೆ ಆಗ್ತಿಲ್ಲ ಸರ್​, ನಾವು ಸಂಜೆಯೇ ಮೇಲ್​ ಮಾಡಿದ್ದೀವಿ​. ನಮ್ಮ ಮನೆಯನ್ನ ಉಳಿಸಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡ್ಕೋತೀವಿ ಅಂತ ಎಲ್ಲರಿಗೂ ಹೇಳಿಬಿಟ್ಟಿದ್ದೀವಿ​. ಸಿಎಂ ಬರ್ಬೇಕು, ಮಾತಾಡ್ಬೇಕು. ಅದ್ಯಾರು ಆರ್ಡರ್​ ಕೊಟ್ಟಿದ್ದಾರೋ ಅವರನ್ನ ಕರೀರಿ ಇಲ್ಲಿಗೆ. ಪೊಲೀಸ್​ನವ್ರು ಹಿಂದೆ ಹೋಗ್ರಿ. ನಮಗೇನಾದ್ರು ಆದ್ರೆ ಪೊಲೀಸ್​ನವರೇ ಕಾರಣ… ಸರ್​ ಸಿಎಂ ಅವರಿಗೆ ರಿಕ್ವೆಸ್ಟ್​ ಮಾಡಿ ಇಲ್ಲಿಗೆ ಕರೆಸ್ರೀ ಸರ್​…’ ಎಂದು ದಂಪತಿ ಇಬ್ಬರೂ ಪೊಲೀಸರಿಗೆ ತಾಕೀತು ಮಾಡುತ್ತಲೇ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಯ ಬೆದರಿಕೆ ಹಾಕುತ್ತಲೇ ಇದ್ದರು.
ಪೊಲೀಸರು ಎಷ್ಟೇ ಮನವೊಲಿಸಿದರೂ ದಂಪತಿ ಹಠ ಬಿಡದೆ ರಾಜಕಾಲುವೆ ದಡದಲ್ಲೇ ನಿಂತು ಆತ್ಮಹತ್ಯೆ ಬೆದರಿಕೆ ಹಾಕುತ್ತಲೇ ಇದ್ದರು. ಹಿಂದಿನಿಂದ ಬಂದ ರಕ್ಷಣಾ ಕಾರ್ಯಾಚರಣೆ ತಂಡ ದಂಪತಿಯ ಮೇಲೆ ನೀರು ಹಾಯಿಸಿ ಆತ್ಮಹತ್ಯೆ ಯತ್ನವನ್ನ ವಿಫಲಗೊಳಿಸಿ ಹೊರಗೆ ಎಳೆದುಕೊಂಡರು.
ಎಕ್ಸಾಂ ಹಾಲ್​ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಫೋಟೋ-ಸಹಿ! ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿಗೆ ಶಾಕ್

ಬಸ್​ನಲ್ಲಿ ಚಿನ್ನ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆ: ಮಾನವೀಯತೆ ಮೆರೆದ ಮಧುಗಿರಿ ಡಿಪೋ ಕಂಡಕ್ಟರ್ ಶ್ರೀಧರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
