ಉಡುಪಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಸಂತೋಷ್​ ಸಾವಿನ ಪ್ರಕರಣ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಅತ್ತ ಈಶ್ವರಪ್ಪರನ್ನ ಬಂಧಿಸುವವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಕಾಂಗ್ರೆಸ್​ ಪಟ್ಟು ಹಿಡಿದಿದೆ. ಇದೀಗ ಈ ಪ್ರಕರಣದಲ್ಲಿ ರಾಜೇಶ್ ಎಂಬ ಹೊಸ ಹೆಸರು ತಳುಕು ಹಾಕಿಕೊಂಡಿದ್ದು, ಕುತೂಹಲ ಮೂಡಿಸಿದೆ. ‘
ಸಾವಿಗೂ ಮುನ್ನ ಉಡುಪಿಯ ಶಾಂಭವಿ ಲಾಡ್ಜ್​ನಲ್ಲಿ ತನ್ನಿಬ್ಬರು ಸ್ನೇಹಿತರಾದ ಸಂತೋಷ್ ಮೇದಪ್ಪ ಮತ್ತು ಪ್ರಶಾಂತ್ ಶೆಟ್ಟಿ ಜತೆ ತಂಗಿದ್ದ ಸಂತೋಷ್ ಪಾಟೀಲ್, ಸೋಮವಾರ ಸಂಜೆ ತನಗಾಗಿ ಪ್ರತ್ಯೇಕ ರೂಮ್ ಬುಕ್ ಮಾಡಿದ್ದರು. ನನ್ನನ್ನು ಭೇಟಿಯಾಗಲು ರಾಜೇಶ್ ಎಂಬಾತ ಬರುತ್ತಾನೆ. ನಾನು ಮತ್ತು ಅವನು ಒಂದೇ ಕೋಣೆಯಲ್ಲಿ ಇರುತ್ತೇವೆ. ನೀವಿಬ್ಬರೂ ಮತ್ತೊಂದು ರೂಮಿನಲ್ಲಿ ಉಳಿದುಕೊಂಡಿರಿ ಎಂದು ಹೇಳಿರುವುದಾಗಿ ಸ್ನೇಹಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಸಂತೋಷ್​ ಕೇಸ್​ ಬಗ್ಗೆ ಪೊಲೀಸರು ಮೂರು ತಂಡ ರಚಿಸಿ ತನಿಖೆ ಮಾಡುತ್ತಿದ್ದು, ಈ ರಾಜೇಶ್ ಯಾರು? ಎಂಬ ತನಿಖೆ ಮುಂದುವರಿದಿದೆ.
ರಾಮನಗರದಲ್ಲಿ ಕಾಂಗ್ರೆಸ್​ ಮುಖಂಡನ ಕೊಲೆ: 49 ದಿನದ ಬಳಿಕ ಬಯಲಾಯ್ತು ಸೊಸೆ ರಹಸ್ಯ

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

ನಾನು ಶಾಸಕ, ಸಚಿವ, ಡಿಸಿಎಂ ಆಗಿದ್ದೀನಿ… ಆದ್ರೆ ನನ್ನನ್ನು ಈಗಲೂ ದೇವಸ್ಥಾನಕ್ಕೆ ಸೇರಿಸಲ್ಲ: ಡಾ.ಪರಮೇಶ್ವರ್

ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 14 =
Remember me
