ಬೆಂಗಳೂರು:ಕರ್ನಾಟಕ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಒಟ್ಟು 6 ಮಂದಿ ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧ ಹಾಗೂ ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಯೂ ಆದ ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್​, ಜಗ್ಗೇಶ್​, ಲೆಹರ್​ ಸಿಂಗ್​. ಕಾಂಗ್ರೆಸ್​ನಿಂದ ಜೈರಾಮ್​ ರಮೇಶ್​, ಮನ್ಸೂರ್​ ಅಲಿ ಖಾನ್​. ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದು, ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ ಹಣಾಹಣಿಯ ಕಣ ನಿಚ್ಚಳವಾಗಲಿದೆ.
ಮತ ಮೌಲ್ಯದ ಲೆಕ್ಕಾಚಾರದಂತೆ ಗೆಲುವಿಗೆ ಒಬ್ಬ ಅಭ್ಯರ್ಥಿ 45 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕು. ಒಟ್ಟು 224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 119 (ಸ್ಪೀಕರ್​ ಹೊರತುಪಡಿಸಿ) ಶಾಸಕರು, ಇಬ್ಬರು ಸಹ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್​ 69 ಶಾಸಕರ ಜತೆಗೆ ಒಬ್ಬ ಸಹ ಸದಸ್ಯ ಹಾಗೂ ಜೆಡಿಎಸ್​ನ 32 ಶಾಸಕರಿದ್ದಾರೆ. ಸಂಖ್ಯಾಬಲದಂತೆ ಬಿಜೆಪಿ ಎರಡು, ಕಾಂಗ್ರೆಸ್​ ಒಂದು ಸ್ಥಾನ ನಿರಾಯಾಸವಾಗಿ ಗೆಲ್ಲಲಿದ್ದು, ಜೆಡಿಎಸ್​ 13 ಮತಗಳ ಕೊರತೆಯಿದ್ದರೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಬಿಜೆಪಿಯ ನಿರ್ಮಲಾ ಸೀತಾರಾಮನ್​, ಜಗ್ಗೇಶ್​, ಕಾಂಗ್ರೆಸ್​ನ ಜೈರಾಮ್​ ರಮೇಶ್​ ಜಯ ಸಾಧಿಸುವುದು ಖಚಿತವಾಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಲೆಹರ್​ ಸಿಂಗ್​ ಸಿರೋಯಾ, ಮನ್ಸೂರ್​ ಖಾನ್​ ಮತ್ತು ಕುಪೇಂದ್ರ ರೆಡ್ಡಿ ನಡುವೆ ನಡೆಯಲಿರುವ ಕುಸ್ತಿ ಕುತೂಹಲ ಕೆರಳಿಸಿದೆ.
ಅನಂತರಾಜು ಡೆತ್​ ಕೇಸ್​: ಬ್ಯಾಡರಹಳ್ಳಿ ಪೊಲೀಸ್​ ಠಾಣೆ ಮುಂಭಾಗವೇ ಬಸ್​ಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಯಸಿ!

ಡಿಕೆಶಿ ಮುಖ್ಯಮಂತ್ರಿ ಆಗೋದು ಖಚಿತ! ಆಗ ಕುಣಿಗಲ್​ಗೆ ನಾನೇ ಸಿಎಂ ಎಂದ ಶಾಸಕ ರಂಗನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
