ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಗೆ 4 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಲು ಇಂದು ಚುನಾವಣೆ ನಡೆಯುತ್ತಿದ್ದು, ಕ್ಲೈಮಾಕ್ಸ್​ ಹಂತಕ್ಕೆ ಬಂದಿದೆ. 4ನೇ ಸ್ಥಾನಕ್ಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಶತಾಯಗತಾಯ ಗೆಲ್ಲಿಸಿಕೊಳ್ಳಬೇಕೆಂದು ಮೂರು ಪಕ್ಷದ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪ್ರತಿ ಮತವೂ ಇಲ್ಲಿ ಪ್ರಮುಖ. ಹಾಗಾಗಿ ತುಂಬಾ ಕೇರ್​ಫುಲ್​ ಆಗಿ ಮತಚಲಾವಣೆ ನಡೆಯುತ್ತಿದೆ. ಆದರೆ, ಎಚ್​.ಡಿ.ರೇವಣ್ಣ ಚಲಾಯಿಸಿದ ಮತ ಅಸಿಂಧು ಆಗುತ್ತೆ ಎಂದು ಬಿಜೆಪಿಯ ಏಜೆಂಟರು ಆಕ್ಷೇಪಣೆ ಸಲ್ಲಿಸಿದ್ದಾರೆ.
ರಾಜ್ಯಸಭಾ ಚುನಾವಣೆ‌ಯಲ್ಲಿ ನಿಯಮದ ಪ್ರಕಾರ ಶಾಸಕ ಮತದಾನ‌ ಮಾಡಿದ ನಂತರ ತಮ್ಮ ಪಕ್ಷದ ಏಜೆಂಟ್‌ಗೆ ಮತ ಪತ್ರ ತೋರಿಸಬೇಕಾಗುತ್ತದೆ. ಜೆಡಿಎಸ್‌ನ ಎಚ್.ಡಿ.ರೇವಣ್ಣ ಮೊದಲ‌ ಮತ‌ ಚಲಾಯಿಸಿದ ಬಳಿಕ ಡಿ.ಕೆ.ಶಿವಕುಮಾರ್‌ಗೆ ಮತ ಪತ್ರ ತೋರಿಸಿದ್ದಾರೆ. ಏಜೆಂಟ್ ಸ್ಥಾನದಲ್ಲಿದ್ದ ಪುಟ್ಟರಾಜು ಕಡೆಗೂ ಮತ ಪತ್ರ ತೋರಿಸಿದ್ದಾರೆ. ಆದರೆ, ಡಿಕೆಶಿಗೆ‌ ಮತ ಪತ್ರ ತೋರಿಸಿದ್ದು ನಿಯಮ ಉಲ್ಲಂಘನೆಯಾಗುತ್ತದೆ. ರೇವಣ್ಣರ ಮತವನ್ನು ಅಸಿಂಧುಗೊಳಿಸಿ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಚುನಾವಣಾಧಿಕಾರಿ ಬಳಿ ದೂರು ದಾಖಲಿಸಿದ್ದಾರೆ. ರೇವಣ್ಣರ ಮತ ಸಿಂಧು ಆಗುತ್ತಾ ಇಲ್ಲವೇ ಅಸಿಂಧು ಆಗುತ್ತಾ? ಎಂಬ ಪ್ರಶ್ನೆಗೆ ಇನ್ನು ಕೆಲವೇ ಕ್ಷಣದಲ್ಲಿ ಚುನಾವಣಾಧಿಕಾರಿ ಅವರೇ ಉತ್ತರಿಸಲಿದ್ದಾರೆ.
ರಾಜ್ಯಸಭೆ ಚುನಾವಣೆ: ನಿರ್ಮಲಾಗೆ ಗೆಲುವು, ಕಾಂಗ್ರೆಸ್ ಮನವೊಲಿಕೆ ವಿಫಲ

ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡ್ರಾ ಎಚ್​ಡಿಕೆ? ಸಿದ್ದರಾಮಯ್ಯ-ರಮೇಶ್​ಕುಮಾರ್​ಗೆ ಅಭಿನಂದಿಸಿದ್ದೇಕೆ?

ಜೆಡಿಎಸ್​ -ಕಾಂಗ್ರೆಸ್​ನ ಘಟಾನುಘಟಿಗಳಿಗೆ ಕೋಟಿ-ಕೋಟಿ ಸಾಲ ಕೊಟ್ಟ ಕುಪೇಂದ್ರರೆಡ್ಡಿ! ದೇವೇಗೌಡರ ಕುಟುಂಬಕ್ಕೂ ಸಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
