ಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ‘ಶ್ರೀನಿವಾಸದ್ವಯರು’ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಶಾಸಕರ ಜತೆಯಲ್ಲೇ ಮತದಾನ ಕೇಂದ್ರಕ್ಕೆ ಆಗಮಿಸಿದ ಕೋಲಾರ ಕ್ಷೇತ್ರದ ಜೆಡಿಎಸ್​ ಶಾಸಕ ಶ್ರೀನಿವಾಸ್​ಗೌಡ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು. ಅತ್ತ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್​ ಮತಪೆಟ್ಟಿಗೆಗೆ ಖಾಲಿ ಪತ್ರ ಹಾಕಿದ್ದು, ಇವರ ಮತ ಅಸಿಂಧುಗೊಂಡಿದೆ.
ಶಾಸಕರು ಮತ ಪತ್ರದಲ್ಲಿ ನಮೂದು ಮಾಡಿದ ನಂತರ ತಮ್ಮ‌ ಪಕ್ಷದ ಏಜೆಂಟ್‌ ಇರುವ ಕ್ಯಾಬಿನ್​ಗೆ ತೆರಳಬೇಕು. ಆದರೆ, ಶ್ರೀನಿವಾಸಗೌಡರು ಜೆಡಿಎಸ್ ಕ್ಯಾಬಿನತ್ತ ಗಮನ‌ ಕೊಡದೇ ಮತ ಪೆಟ್ಟಿಗೆಗೆ ಮತ ಪತ್ರ ಹಾಕಿ ಸಿದ್ದರಾಮಯ್ಯರನ್ನು ಭೇಟಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್​ಗೌಡ, ಅಡ್ಡ ಮತದಾನ ಮಾಡಿರುವುದಾಗಿ ಒಪ್ಪಿಕೊಂಡರು. ನಾನು ಕಾಂಗ್ರೆಸ್​ನಲ್ಲಿದ್ದವ. ಜೆಡಿಎಸ್​ನಿಂದ ಹೊರ ಬಂದಿದ್ದೇನೆ ಎಂದು ಸಂದೇಶ ರವಾನಿಸಿದರು.
ಗುಬ್ಬಿ ಶಾಸಕ ಶ್ರೀನಿವಾಸ್, ನಿಯಮದ ಪ್ರಕಾರ ಮತ ಪತ್ರದಲ್ಲಿ ಅಭ್ಯರ್ಥಿ ಹೆಸರಿನ ಮುಂದೆ ತಮ್ಮ ಗುರುತು ಹಾಕದೆ ಖಾಲಿ ಮತ ಪತ್ರವನ್ನು ಬಾಕ್ಸ್‌ಗೆ ಹಾಕಿದ್ದಾರೆ. ಆ ಮೂಲಕ ಯಾರಿಗೂ ಮತ ಹಾಕಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್​ನ ಪೋಲಿಂಗ್​ ಏಜೆಂಟ್​ ಎಚ್​.ಡಿ. ರೇವಣ್ಣ, ಗುಬ್ಬಿ ಶ್ರೀನಿವಾಸ್​ ಯಾರಿಗೂ ಮತ ಹಾಕಿಲ್ಲ. ನನಗೆ ಖಾಲಿ ಮತ ಪತ್ರ ತೋರಿಸಿದ್ರು ಎಂದಿದ್ದಾರೆ.
ಎಚ್​.ಡಿ.ರೇವಣ್ಣ ಮತ ಅಸಿಂಧು? ಮತದಾನದ ವೇಳೆ ಎಡವಿದ್ರಾ ಜೆಡಿಎಸ್​ ನಾಯಕ?

ರಾಜ್ಯಸಭೆ ಚುನಾವಣೆ: ನಿರ್ಮಲಾಗೆ ಗೆಲುವು, ಕಾಂಗ್ರೆಸ್ ಮನವೊಲಿಕೆ ವಿಫಲ

ಎಸ್‌ಬಿಐ ಬ್ಯಾಂಕ್​ನಲ್ಲೇ 1.60 ಕೋಟಿ ರೂ. ದೋಚಿದ ಬ್ಯಾಂಕ್ ಕ್ಯಾಷಿಯರ್! ಪತ್ನಿ-ತಾಯಿ ಖಾತೆಗೆ ವರ್ಗಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
