ಬೆಂಗಳೂರು:ಭಾರೀ ಕುತೂಹಲ ಮೂಡಿಸಿರುವ ರಾಜ್ಯಸಭೆ ಚುನಾವಣೆ ಕ್ಲೈಮಾಕ್ಸ್​ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಕ್ಷಣದಲ್ಲಿ ಗೆಲುವಿನ ಮಅಲೆ ಯಾರಿಗೆ ಎಂಬ ಕುತೂಹಲಕ್ಕೆ ತೆರಬೀಳಲಿದೆ. ಆದರೆ, ಮತದಾನ ಮಾಡಲೆಂದು ಜೆಡಿಎಸ್​ ಶಾಸಕರೊಂದಿಗೆ ಆಗಮಿಸಿದ ಎಚ್​.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಆಡಿದ ಆ ಒಂದು ಮಾತು ‘ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡ್ರಾ ಎಚ್​ಡಿಕೆ? ಕುಪೇಂದ್ರ ರೆಡ್ಡಿಗೆ ಸೋಲು ಖಚಿತವಾಯ್ತೆ?, ಕಾಂಗ್ರೆಸ್​-ಜೆಡಿಎಸ್​ ನಡುವಿನ ಕದನದಲ್ಲಿ ಬಿಜೆಪಿಗೆ ಲಾಭವಾಯ್ತೆ?’ ಎಂಬ ಪ್ರಶ್ನೆಗಳು ಮೂಡಿವೆ.
‘ಬಿಜೆಪಿ ಗೆಲುವಿಗೆ ಕಾರಣವಾದ ಸಿದ್ದರಾಮಯ್ಯ ಮತ್ತು ರಮೇಶ್​ಕುಮಾರ್​ ಅವರನ್ನು ನಾನು ಅಭಿನಂದಿಸುತ್ತೇನೆ. ಯಾಕಂದ್ರೆ 4ನೇ ಸ್ಥಾನಕ್ಕೆ ಬಿಜೆಪಿ ಗೆದ್ದರೆ ಅದಕ್ಕೆ ಇವರಿಬ್ಬರೇ ಕಾರಣ. ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್​ಗೌಡ ಕಾಂಗ್ರೆಸ್​ಗೆ ಮತ ಹಾಕ್ತೀನಿ ಅಂದಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್​ ಕೂಡ ಜೆಡಿಎಸ್​ಗೆ ಮತ ಹಾಕಲ್ಲ’ ಎಂದು ಎಚ್​ಡಿಕೆ ಹೇಳಿದರು. ಕಾಂಗ್ರೆಸ್​ ಶಾಸಕರ 2ನೇ ಪ್ರಾಶಸ್ತ್ಯ ಮತಗಳು ಜೆಡಿಸ್​ಗೆ ಬಂದರೆ ಕುಪೇಂದ್ರ ರೆಡ್ಡಿ ಗೆಲ್ಲಬಹುದು ಎಂದೂ ಎಚ್​ಡಿಕೆ ಲೆಕ್ಕಾಚಾರ ಹಾಕಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ವಿರುದ್ಧ ರಣತಂತ್ರ ಹೆಣೆದ ಕಾಂಗ್ರೆಸ್​! ಇಲ್ಲಿದೆ ಕೈ ನಾಯಕರ ಲೆಕ್ಕಾಚಾರ

ಜೆಡಿಎಸ್​ -ಕಾಂಗ್ರೆಸ್​ನ ಘಟಾನುಘಟಿಗಳಿಗೆ ಕೋಟಿ-ಕೋಟಿ ಸಾಲ ಕೊಟ್ಟ ಕುಪೇಂದ್ರರೆಡ್ಡಿ! ದೇವೇಗೌಡರ ಕುಟುಂಬಕ್ಕೂ ಸಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
