ರಾಮನಗರ:ದೇವೇಗೌಡರಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ಕುಮಾರಸ್ವಾಮಿ ಅವರಿಗೂ ಅವಕಾಶ ಮಾಡಿಕೊಟ್ಟೀದ್ದೀರಿ. ನನಗೆ ನಿಮ್ಮ ಹಾರ ಬೇಡ. ನನಗೂ ಸಿಎಂ ಆಗುವ ಅವಕಾಶ ಮಾಡಿಕೊಡಿ ಎಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಮ್ಮನ್ನು ಕೇಳುತ್ತಿದ್ದೇನೆ… ರಾಮನಗರ ಕ್ಷೇತ್ರದಲ್ಲಿ ನಾನು ಯಾರನ್ನು ನಿಲ್ಲಿಸುತ್ತೇನೋ ಅವರಿಗೆ ಮತ ನೀಡಿ ಗೆಲ್ಲಿಸಿ ಕೊಡಿ. ನಾನು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.
ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ರಾಮನಗರದ ಶ್ರೀರಾಮ ಥಿಯೇಟರ್ ಬಳಿ ಮಂಗಳವಾರ ರಾತ್ರಿ ಕಾಂಗ್ರೆಸ್​ನಿಂದ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ. ಸಿಎಂ ಆಗಲು ನನಗೂ ಅವಕಾಶ ಕೊಡಿ. ನನಗೆ ಯಾವ ಹೂವಿನ ಹಾರ ಬೇಡ. ನಾನಿಲ್ಲಿ ಅಭ್ಯರ್ಥಿಯನ್ನ ನಿಲ್ಲಿಸುತ್ತೇನೆ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ. ನಿಮ್ಮ ಜಿಲ್ಲೆಯ ಮಗ ನಾನು. ನನಗೂ ಅವಕಾಶ ಕೊಡಬೇಕು ಎಂಬ ಆಸೆ ನಿಮಗಿದ್ದರೆ ರಾಮನಗರದಲ್ಲಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ಮನವಿ ಮಾಡುವ ಮೂಲಕ ಎಚ್​.ಡಿ. ಕುಮಾರಸ್ವಾಮಿಯ ಕರ್ಮಭೂಮಿಯಲ್ಲೇ ಜೆಡಿಎಸ್​ ಅನ್ನು ಹಣಿಯುವ ಇಂಗಿತ ಹೊರಹಾಕಿದರು.
ಪ್ರತಿಯೊಬ್ಬರ ಬದುಕಿನಲ್ಲಿ ಸರ್ಕಾರ ಕತ್ತರಿ ಹಾಕುತ್ತಿದೆ. ನಿಮ್ಮ ಸಂಬಳ ಹೆಚ್ಚಾಗಿಲ್ಲ, ಆದರೆ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ನೀವು ನೋವು ಅನುಭವಿಸುತ್ತಿದ್ದೀರಿ. ನಿಮ್ಮ ಜೇಬಿಗೆ ಸರ್ಕಾರ ಕತ್ತರಿಗೆ ಹಾಕುತ್ತಿದೆ. ನಿಮ್ಮ ಆದಾಯ ಪಾತಳಕ್ಕೆ ಹೋಗಿದೆ. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ ಎಂದ ಡಿಕೆಶಿ, ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ರಾಮನಗರ ಜನತೆ ನನಗೆ ಭವ್ಯ ಸ್ವಾಗತ ಮಾಡಿದ್ದರು ಎಂದು ಸ್ಮರಿಸಿದರು.
ಇನ್ನು ಡಿಕೆಶಿ ಅವರ ಈ ಮಾತು ರಾಮನಗರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಎಚ್​.ಡಿ.ಕುಮಾರಸ್ವಾಮಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಅಖಾಡಕ್ಕಿಳಿಯುವ ಅಭ್ಯರ್ಥಿ ಯಾರು? ಡಿಕೆಶಿ ಮಾಸ್ಟರ್​ ಪ್ಲ್ಯಾನ್​ ಏನಿರಬಹುದು? ಎಂಬಿತ್ಯಾದಿ ಪ್ರಶ್ನೆ ಎದ್ದಿದೆ.
ಅತ್ತ ಚಾಮುಂಡೇಶ್ವರಿ ಕರಗ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್​.ಡಿ.ಕುಮಾರಸ್ವಾಮಿ, ನಾನು ನಿಮ್ಮ ಮನೆಯ ಮಗ. ನಾನು ಚುನಾವಣೆಗೆ ಅರ್ಜಿ ಹಾಕಿ ಹೋದ ಮೇಲೆ ಮತ ಕೇಳಲು ನಾನು ಬಂದಿಲ್ಲ. ನೀವೇ ಮುಂದೆ ನಿಂತು ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಆರ್ಶೀವಾದವೇ ನನಗೆ ಶ್ರೀರಕ್ಷೆ. ಐದು ವರ್ಷದ ಸರ್ಕಾರವನ್ನು ಜನತೆ ನನ್ನ ಕೈಗೆ ಕೊಡ್ತಾರೆ ಎಂದು ನಂಬಿದ್ದೇನೆ. ಚಾಮುಂಡೇಶ್ವರಿ ಸನ್ನಿಧಿಯಿಂದಲೇ ನನ್ನ ಹೋರಾಟ ಆರಂಭಿಸಿದ್ದೇನೆ ಎಂದರು.
ಇದಾದ ಬಳಿಕ ಡಿಕೆಶಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಶಿವಕುಮಾರ್​ ಅವರ ಮಾತನ್ನು ತಪ್ಪಾಗಿ ಅರ್ಥೈಸಬಾರದು. ಅವರವರ ಮನಸ್ಥಿತಿಯಲ್ಲಿ ಹೇಳುತ್ತಾರೆ. ರಾಜ್ಯದ ಜನತೆಯೇ ಅಂತಿಮ ತೀರ್ಪುದಾರರು ಎಂದರು.
ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಗಗನಚುಕ್ಕಿ-ಭರಚುಕ್ಕಿಗೆ ಟೂರ್​ ಪ್ಯಾಕೇಜ್​ ಘೋಷಿಸಿದ ಕೆಎಸ್​ಆರ್​ಟಿಸಿ: ಪ್ರವಾಸ ದರ ತಲಾ 250 ರೂಪಾಯಿ

ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ ಹಾಕಿದ್ದು ಹುಚ್ಚ ವೆಂಕಟ್​ ಅಲ್ಲ, SSLC ವಿದ್ಯಾರ್ಥಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರ ಬಾಳಲ್ಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
