ಬೆಂಗಳೂರು:ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​ ಮತ್ತು ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರವನ್ನು ಕೆಳಗಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ರಮೇಶ್​ ಜಾರಕಿಹೊಳಿ ಇದೀಗ, ನನಗೂ ಒಳ್ಳೆಯ ಕಾಲ ಬರಲಿದೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ… ಎಂದಿದ್ದಾರೆ.
ಬಿಎಸ್​ವೈ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್​ ಜಾರಕಿಹೊಳಿ, ಸೆಕ್ಸ್​ ಸಿಡಿ ಕೇಸ್​ನಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು. ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲೂ ಇವರಿಗೆ ಸ್ಥಾನ ಸಿಕ್ಕಿಲ್ಲ. ಇವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ನೀಡಲಾಗುತ್ತೆ ಎನ್ನಲಾಗಿತ್ತಾದರೂ ಆದರೂ ಕೈಗೂಡಲಿಲ್ಲ. ಈ ಬಾರಿ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಪಟ್ಟ ಕೈ ತಪ್ಪಿದ್ದು, ರಮೇಶ್​ಗೆ ಭಾರಿ ಮುಖಭಂಗ ಆದಂತಾಗಿದೆ. ಅತ್ತ ಸಿಡಿ ಕೇಸ್​ ಸಂಬಂಧ ಬಿ ರಿಪೋರ್ಟ್ ಹಾಕಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಈ ಕುರಿತು ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ರಮೇಶ್​ ಜಾರಕಿಹೊಳಿ, ‘ನನಗೂ ಒಳ್ಳೆಯ ಕಾಲ ಬರಲಿದೆ. ನಮ್ಮ ಅಧ್ಯಕ್ಷರನ್ನ ಭೇಟಿಯಾಗಲು ಬಂದಿದ್ದೆ. ನಮ್ಮ ಕ್ಷೇತ್ರದ ಜನರು ನನ್ನೊಟ್ಟಿಗೆ ಇದ್ದಾರೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ಬಿ ರಿಪೋರ್ಟ್ ಹಾಕೋದು ನನಗೆ ಗೊತ್ತಿಲ್ಲ. ನೋಡೋಣ ಏನಾಗುತ್ತೋ… ಎಂದರು.
ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್‌ ಬಂಗಲೆ! ಅರೇಬಿಯನ್‌ ಶೈಲಿಯ ಅರಮನೆಗೆ ಚಿನ್ನದ ಲೇಪನ…

ಬಿಜೆಪಿಗೆ ಬಂದ ಶಾಸಕ ಮಹೇಶ್​ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್​ವೈ!

VIDEO| ಆಗುಂಬೆ ಘಾಟ್​ನಲ್ಲಿ ಚಲಿಸುತ್ತಿದ್ದ ಟ್ರಕ್​ ಪ್ರಪಾತದತ್ತ… ಅಬ್ಬಾ.. ಜಸ್ಟ್​ ಮಿಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 15 =
Remember me
