ಬೆಂಗಳೂರು:ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ರಾಜ್ಯದ ನಂ.1 ದಿನಪತ್ರಿಕೆವಿಜಯವಾಣಿ,ದಿಗ್ವಿಜಯ 24×7ನ್ಯೂಸ್​ ಚಾನೆಲ್​ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ (ಏ.8) ಭಾನುವಾರದವರೆಗೆ (ಏ.10) “ರಿಯಲ್​ಎಸ್ಟೇಟ್​ ಎಕ್ಸ್​ಪೋ” ಆಯೋಜಿಸಿದೆ.
ಅಶ್ವಸೂರ್ಯ ರಿಯಾಲಿಟಿಸ್​ ಅರ್ಪಿಸುವ ಈ ಎಕ್ಸ್​ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಡ್​, ಎಸ್​ಆರ್​ಎಸ್​ ಪ್ರಮೋಟರ್ಸ್​, ಅಥರ್ವ ಗ್ರೂಪ್ಸ್​, ಡಿಎಸ್​ ಮ್ಯಾಕ್ಸ್​, ಕೆಎನ್​ಎಸ್​ ಇನ್​ಫ್ರಾ, ಕಲ್ಯಾಣ್​ ಶೆಲ್ಟರ್ಸ್​, ಗುರು ಪುನ್ವಾನಿ, ಆರ್ಯನ್​ ಡೆವಲಪರ್ಸ್​ ಮತ್ತು ಪ್ರಮೋಟರ್ಸ್​, ಶರಣ್ಯ ಫಾರ್ಮ್ಸ್, ಎಂ.ಆರ್​. ಪ್ರಾಪರ್ಟೀಸ್​, ಆಶೀರ್ವಾದ್​ ಪ್ರಾಪರ್ಟೀಸ್​, ಅಲೈಡ್​ ಹ್ಯಾಬಿಟ್ಯಾಟ್ಸ್​, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್​ಫ್ರಾಸ್ಟ್ರಕ್ಚರ್​, ಎ4 ಪ್ರಾಪಟೀರ್ಸ್​, ಭಗಿನಿ ಡೆವಲಪರ್ಸ್​, ಎಂಎಚ್​ ಪ್ರಮೋಟರ್ಸ್​, ಎಂಡಿಎಸ್​, ಗೃಹಮಿತ್ರ ಡೆವಲಪರ್ಸ್​, ಪಿ.ಸಿ. ರಿಯಾಲ್ಟಿ, ಮಥರ್​ ಅರ್ಥ್​ ಬಿಲ್ಡರ್ಸ್​ ಆ್ಯಂಡ್​ ಡೆವಲಪರ್ಸ್​ ಮತ್ತು ಎಟಿಝಡ್​ ಪ್ರಾಪಟೀರ್ಸ್​ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ನಿವೇಶನ, ಅಪಾರ್ಟ್​ಮೆಂಟ್​ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ.
ಇಂಡಿಯನ್​ ಬ್ಯಾಂಕ್​, ಕೆನರಾ ಬ್ಯಾಂಕ್​ ಹಾಗೂ ಆರ್​ಇಪಿಸಿಒ ಹೋಮ್​ ಫೈನಾನ್ಸ್​ ಹಣಕಾಸು ನೆರವು ಒದಗಿಸಲಿವೆ. ಪೀಠೋಪಕರಣ ಉದ್ಯಮ, ಕಬ್ಬಿಣ ಹಾಗೂ ಸಿಮೆಂಟ್​ ಕಂಪನಿಗಳು, ಮನೆಯ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ವಿತರಕರು ಕೂಡ ಪಾಲ್ಗೊಳ್ಳಲಿದ್ದಾರೆ.
ಉಚಿತ ಪ್ರವೇಶ, ಪಾರ್ಕಿಂಗ್​ ವ್ಯವಸ್ಥೆ:ಕಾಲೇಜು ಮೈದಾನದಲ್ಲಿ ರಿಯಾಲ್ಟಿ ಮೇಳಕ್ಕೆ ಬೃಹತ್​ ವೇದಿಕೆ ಸಿದ್ಧಪಡಿಸಲಾಗಿದೆ. ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯವಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಸ್ಟಾಲ್​ಗಳ ಪ್ರವೇಶದಲ್ಲಿ ಸುಂದರವಾದ ಕಟೌಟ್​ ನಿರ್ಮಾಣವಾಗಿದೆ. ಎಲ್ಲ ಸ್ಟಾಲ್​ಗಳಿಗೆ ವಿದ್ಯುತ್​ ಒದಗಿಸಲಾಗಿದೆ. ಎಕ್ಸ್​ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಸೇರಿ ಇತರೆ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್​ಮೆಂಟ್​, ವಿಲ್ಲಾ, ಫಾರ್ಮ್​ ಹೌಸ್​ ಹಾಗೂ ಫಾರಂಪ್ಲಾಟ್​ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕನಸು ನನಸಾಗಿಸಿಕೊಳ್ಳಿ:ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಕೋವಿಡ್​ ಬಳಿಕ ಮನೆಯ ಮಹತ್ವ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಆಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್​ಸಿಟಿ ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶನ, ವಿಲ್ಲಾ, ಫ್ಲ್ಯಾಟ್​ ಹಾಗೂ ಫಾರ್ಮ್​ಹೌಸ್​ಗಳನ್ನು ಖರೀದಿಸಿ ತಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ ಇದಾಗಿದೆ. ಬಿಡಿಎ ಹಾಗೂ ಬಿಎಂಆರ್​ಡಿಎ ಸೈಟ್​ಗಳು ಲಭ್ಯವಿದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ಸಾರ್ವಜನಿಕರು ಇಂತಹ ಒಳ್ಳೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

ರಾಹುಲ್​ ಗಾಂಧಿ ಹೆಸರಿಗೆ ಫ್ರೀಯಾಗಿ 50 ಲಕ್ಷ ಮೌಲ್ಯದ ಆಸ್ತಿ ಬರೆದು 100 ಗ್ರಾಂ ಚಿನ್ನವನ್ನೂ ಕೊಟ್ಟ ವೃದ್ಧೆ!

ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + three =
Remember me
