ಬೆಳಗಾವಿ:ಮಹಾಮಾರಿ ಕರೊನಾವನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್​ ಕಳ್ಳನೊಬ್ಬ, ಕೋಟ್ಯಂತರ ರೂ. ಮೌಲ್ಯದ ರಕ್ತಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ವಾಹನದ ಮೇಲೆ ‘ಕೋವಿಡ್-19 ಸೇವೆಗಾಗಿ ಹಣ್ಣು ಮಾರಾಟ ವಾಹನ’ ಎಂದು ಬೋರ್ಡ್ ಹಾಕಿಕೊಂಡು ಅದರಲ್ಲಿ ರಕ್ತಚಂದನ ತುಂಬಿಕೊಂಡು ಕರ್ನಾಟಕ-ಆಂಧ್ರ ಅಂತರರಾಜ್ಯ ಗಡಿ ದಾಟಿ ಮಹಾರಾಷ್ಟ್ರ ಗಡಿಗೆ ಬಂದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣ ಪುಷ್ಪ ಸಿನಿಮಾ ಸ್ಟೈಲ್​ನಲ್ಲೇ ನಡೆದಿದೆ.
ಯಾಸೀನ್ ಇನಾಯತ್ ಉಲ್ಲಾ ಬಂಧಿತ ಆರೋಪಿ. ಈತ ಕರ್ನಾಟಕದ ಆನೇಕಲ್ ಮೂಲದವ. ಸುಮಾರು ಎರಡೂವರೆ ಕೋಟಿ ಮೌಲ್ಯದ ರಕ್ತಚಂದನ ಮತ್ತು ಕೃತ್ಯಕ್ಕೆ ಬಳಸಿದ ವಾಹನವೊಂದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಷ್ಟ ಸಿನಿಮಾದಲ್ಲಿ ಕಳ್ಳರು ರಕ್ತಚಂದನ ಸಾಗಿಸುವಾಗ ಪೊಲೀಸರಿಗೆ ಅನುಮಾನ ಬಾರದಿರಲೆಂದು ಹಾಲಿನ ವಾಹನ ಬಳಸಿಕೊಂಡ ದೃಶ್ಯವಿದೆ. ಇದನ್ನೇ ಹೋಲುವಂತೆ ಯಾಸೀನ್ ಇನಾಯತ್ ಉಲ್ಲಾ ವಾಹನಕ್ಕೆ ‘ಕೋವಿಡ್-19 ಸೇವೆಗಾಗಿ ಹಣ್ಣು ಮಾರಾಟ ವಾಹನ’ ಎಂಬ ಬೋರ್ಡ್​ ಹಾಕಿಕೊಂಡು ರಕ್ತಚಂದನ ಸಾಗಿಸುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು, ಮಹಾರಾಷ್ಟ್ರದ ಮೀರಜದಲ್ಲಿ ರಕ್ತಚಂದನ ವಶಪಡಿಸಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ.
ಮೆಜೆಸ್ಟಿಕ್ ರೈಲು ನಿಲ್ದಾಣದೊಳಗೇ ತಲೆ ಎತ್ತಿದ ಮಸೀದಿ! ​ಕೂಲಿ ಕಾರ್ಮಿಕರ ರೆಸ್ಟ್ ರೂಂನಲ್ಲಿ ಪ್ರಾರ್ಥನೆ… ವಿಡಿಯೋ ವೈರಲ್

ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಲ್ಲ… ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಸ್ವಾಮಿ ಆಕ್ರೋಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
