ಸುಬ್ರಹ್ಮಣ್ಯ:ಅಕ್ಕಿ ಕಾಳಿನ ಮೇಲೆ ಬರೆಯುವ ಕಲೆ ಕರಗತ ಮಾಡಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯದ ಮೈಕ್ರೋ ಪರಮೇಶ್, 80 ನಿಮಿಷದಲ್ಲಿ 136 ಅಕ್ಕಿ ಕಾಳನ್ನು ಬಳಸಿ ನಾಡಗೀತೆ ಬರೆದಿದ್ದಾರೆ.
ಕನಿಷ್ಠ ಅವಧಿಯಲ್ಲಿ ಕಡಿಮೆ ಅಕ್ಕಿ ಕಾಳಿನಲ್ಲಿ ಸಾಧನೆ ಮೆರೆದಿರುವುದು ಇವರ ಸಾಧನೆ. ಮುಂದೆ ವಂಡರ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡದ ಮುಂದೆ ಈ ಸಾಧನೆಯನ್ನು ಪ್ರಸ್ತುತ ಪಡಿಸಲಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಪರಮೇಶ್ ಮೂಲತಃ ಹಾವೇರಿಯವರು. ಅಕ್ಕಿ ಕಾಳಿನಲ್ಲಿ ಬರೆದ ಸಂಪೂರ್ಣ ನಾಡಗೀತೆಯನ್ನು ಫ್ರೇಮ್ ಅಳವಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ.
ಗಿನ್ನೆಸ್ ರೆಕಾರ್ಡ್ ಸಿದ್ಧತೆ:ನರೇಂದ್ರಮೋದಿ ಅವರ ಜೀವನ ಚರಿತ್ರೆಯನ್ನು 10 ಸಾವಿರಕ್ಕೂ ಅಧಿಕ ಅಕ್ಕಿ ಕಾಳಿನಲ್ಲಿ ಕನಿಷ್ಠ ಅವಧಿಯಲ್ಲಿ ಬರೆದು ಗಿನ್ನೆಸ್ ರೆಕಾರ್ಡ್ ಮಾಡುವತ್ತ ಅಭ್ಯಾಸ ಮಾಡುತ್ತಿದ್ದಾರೆ. ಅಕ್ಕಿ ಕಾಳಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮಹಾತ್ಮೆ ಬರೆಯುವ ಹಂಬಲ ಈ ಕಲಾವಿದನದ್ದು.
ಅಕ್ಕಿ ಕಾಳಿನ ಮೇಲೆ ಬರೆಯುವ ಸೂಕ್ಷ್ಮ ಕಲೆಯಲ್ಲಿ ವಿಶ್ವ ದಾಖಲೆ ಮಾಡುವ ಹಂಬಲ ನನ್ನದು. ಪ್ರಧಾನಿ ನರೇಂದ್ರಮೋದಿ ಅವರ ಜೀವನ ಚರಿತ್ರೆ ಬರೆದು ದಾಖಲೆ ನಿರ್ಮಿಸುವ ಸಿದ್ಧತೆಯಲ್ಲಿದ್ದೇನೆ.| ಮೈಕ್ರೋ ಪರಮೇಶ್
ತುಮಕೂರು ಸ್ಮಾರ್ಟ್​ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳ ಲವ್ವಿಡವ್ವಿ! ಕಾಲೇಜಿಗೆ ಚಕ್ಕರ್ ಹಾಕಿ ಮೈಮರೆಯುತ್ತಿರುವ ಜೋಡಿಗಳು…

ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 11 =
Remember me
