ರಾಮನಗರ:ಚನ್ನಪಟ್ಟಣದಲ್ಲಿ ಶನಿವಾರ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ವೇಳೆ ನಡೆದ ಜೆಡಿಎಸ್​-ಬಿಜೆಪಿ ನಡುವಿನ ಗಲಾಟೆಯಲ್ಲಿ ಯೋಗೇಶ್ವರ್​ರ ಕಾರಿನ ಮೇಲೆ ಕಲ್ಲು-ಮೊಟ್ಟೆ ಎಸೆದ ಪ್ರಕರಣ ಸಂಬಂಧ 14 ಜೆಡಿಎಸ್​ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಯೋಗೇಶ್ವರ್​ರ ಕಾರು ಚಾಲಕ ವೆಂಕಟೇಶ್ ಕೊಟ್ಟ ದೂರಿನ ಮೇರೆಗೆ ಚನ್ನಪಟ್ಟಣ ಗ್ರಾಮೀಣ ಠಾಣೆಯಲ್ಲಿ ರಾಜ್ಯ ಜೆಡಿಎಸ್ ವಕ್ತಾರ ವಿ‌. ನರಸಿಂಹ ಮೂರ್ತಿ, ತಾಪಂ ಮಾಜಿ ಸದಸ್ಯ ಗುರುಕುಮಾರ್. ಚನ್ನಪಟ್ಟಣ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ್ಯ ಅಶಿಶ್, ಮುಖಂಡರಾದ ನವೀನ್, ಪ್ರದೀಪ್, ನಂದೀಶ್, ಬೋರೇಗೌಡ, ಮನು, ಬಿ.ಎನ್. ಮಹೇಶ್, ಶಿವು, ಅರಸೇಗೌಡ, ಡಿ.ಕುಮಾರ್, ಲೋಕೇಶ್, ಪ್ರದೀಪ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ತನ್ನ ಪ್ರಭಾವ ಬಳಸಿ ಚನ್ನಪಟ್ಟಣಕ್ಕೆ 50 ಕೋಟಿ ರೂ. ವಿಶೇಷ ಅನುದಾನ ಪಡೆದಿದ್ದ ವಿಧಾನ ಪರಿಷತ್​ ಸದಸ್ಯ ಯೋಗೇಶ್ವರ್​, ಎಚ್​.ಡಿ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಗುದ್ದಲಿಪೂಜೆ ಮಾಡಲು ಮುಂದಾದಾಗ ಜೆಡಿಎಸ್​ ಕಾರ್ಯಕರ್ತರು ಪ್ರತಿರೋಧ ಒಡ್ಡಿದ್ದರು. ಚನ್ನಪಟ್ಟಣ ತಾಲೂಕಿನ ರಾಂಪುರ, ಬೈರಾಪಟ್ಟಣ, ಕೋಡಂಬಳ್ಳಿ ಸೇರಿ ವಿವಿಧೆಡೆ ಯೋಗೇಶ್ವರ್​ ಅವರಿಗೆ ಅಡ್ಡಿಪಡಿಸಿದ ಜೆಡಿಎಸ್​ ಕಾರ್ಯಕರ್ತರೊಂದಿಗೆ ಬಿಜೆಪಿ ಕಾರ್ಯಕರ್ತರು ಜಟಾಪಟಿ ನಡೆಸಿದ್ದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಕೆಲವೆಡೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
50 ಕೋಟಿ ರೂ. ಅನುದಾನದಲ್ಲಿ ಕೆಆರ್​ಐಡಿಎಲ್​ ಮೂಲಕ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲೆಂದು ಸಿ.ಪಿ.ಯೋಗೇಶ್ವರ್​ ಶನಿವಾರ ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸದೆ, ಶಿಷ್ಟಾಚಾರಕ್ಕಾಗಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಕೊಳ್ಳಲಾಗಿದೆ ಎಂದು ಆರೋಪಿಸಿದ ಜೆಡಿಎಸ್​ ಕಾರ್ಯಕರ್ತರು, ಯೋಗೇಶ್ವರ್​ ಹೋದ ಕಡೆಯಲೆಲ್ಲಾ ಪ್ರತಿರೋಧ ಒಡ್ಡಿದ್ದರು. ಮೊದಲಿಗೆ ರಾಂಪುರದಲ್ಲಿ ತಾಲೂಕು ಜೆಡಿಎಸ್​ ಅಧ್ಯಕ್ಷ ಜಯಮುತ್ತು ನೇತೃತ್ವದಲ್ಲಿ ಪ್ರತಿಭಟಿಸಲು ಮುಂದಾದಾಗ ಪೊಲೀಸರು ಹಲವಾರು ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಬೈರಾಪಟ್ಟಣ ಗ್ರಾಮಕ್ಕೆ ಬಂದ ಯೋಗೇಶ್ವರ್​ಗೆ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಜೆಡಿಎಸ್​ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ವೇಳೆ ಕೆಲವರನ್ನು ಬಂಧಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಭದ್ರತೆಯಲ್ಲಿ ತೆರಳುತ್ತಿದ್ದ ಸಿಪಿವೈ ಕಾರಿನ ಮೇಲೆ ಕೆಲವರು ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದಿದ್ದರು. ಕಾರಿನ ಹಿಂದಿನ ಗಾಜು ಪುಡಿಪುಡಿಯಾಗಿತ್ತು. ಮತ್ತೆ ಲಾಠಿಪ್ರಹಾರ ನಡೆಸಿದ ಪೊಲೀಸರು ಗುಂಪು ಚದುರಿಸಿದ್ದರು.
ಗುದ್ದಲಿ ಪೂಜೆ ಕಾರ್ಯಕ್ರಮ ರದ್ದು ಪಡಿಸುವ ಸಂಬಂಧ ಸೆ.30ರಂದು ಅಧಿಕಾರಿಗಳು ಸೂಚಿಸಿದ್ದರು. ಆದರೂ ಅಧಿಕಾರಿಗಳೇ ಯೋಗೇಶ್ವರ್​ ಜತೆಯಲ್ಲಿ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎನ್ನುವುದು ಎಚ್​ಡಿಕೆ ಆರೋಪ.
ಭಾರತ್​ ಜೋಡೋ ಯಾತ್ರೆಗೆ ನಾಳೆ ಸೋನಿಯಾ ಆಗಮನ: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಅಬ್ಬರ

ಹಸು ಮೇಯಿಸಿಕೊಂಡು ಮನೆಗೆ ತೆರಳುತ್ತಿದ್ದ ಚನ್ನಪಟ್ಟಣದ ರೈತ ದಂಪತಿ ದುರಂತ ಅಂತ್ಯ

ಹಲ್ಲಿಯನ್ನೇ ತಿಂದು ಮುಗಿಸಿದ ಜೇಡ! ಕಡಬ ತಾಲೂಕಿನಲ್ಲಿ ಪ್ರಕೃತಿಯ ವೈಚಿತ್ರ್ಯ

ICU ಬೆಡ್​ ಮೇಲೆ ಮಲಗಿಕೊಂಡೇ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ವೃದ್ಧೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twelve =
Remember me
