ಬೆಂಗಳೂರು:ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಮಳೆನೀರಿನಿಂದ ತುಂಬಿ ಹೋಗಿದ್ದ ರಸ್ತೆಯ ನಡುವೆ ಬಿದ್ದಿದ್ದ ಎಎಪಿ ಅಗರ ವಾರ್ಡಿನ ಅಧ್ಯಕ್ಷೆ ಪಲ್ಲವಿ ಚಿದಂಬರ ಅವರನ್ನು ಅಲ್ಲಿನ ಕಟ್ಟಡ ಕಾರ್ಮಿಕರು ಹಾಗೂ ರಸ್ತೆಯಲ್ಲಿ ತೆರಳುತ್ತಿದ್ದ ಫುಡ್​ ಡೆಲಿವರಿ ಬಾಯ್ಸ್​ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.
ಘಟನೆ ಬಗ್ಗೆ ಪಲ್ಲವಿ ಚಿದಂಬರ ಅವರು ವಿವರಿಸಿರುವ ವಿಡಿಯೋವನ್ನು ಎಎಪಿ ಕೂ ವೇದಿಕೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪಲ್ಲವಿ ಅವರು ಮಾತನಾಡಿದ್ದು, ತಮ್ಮ ಪ್ರಾಣ ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜತೆಗೆ ರಸ್ತೆಯ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.
‘ಜಯನಗರದಿಂದ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ವೇಳೆ ರಸ್ತೆ ಮಳೆ ನೀರಿನಿಂದ ತುಂಬಿ ಹೋಗಿತ್ತು. ರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಲು ಬೈಕ್ ತಿರುಗಿಸುವ ವೇಳೆ ಆಯತಪ್ಪಿ ಬಿದ್ದೆ. ರಸ್ತೆ ಬದಿ ಎಲ್ಲೆಂದರಲ್ಲಿ ಗುಂಡಿಗಳೇ ಆವರಿಸಿವೆ. ರಸ್ತೆಯ ಅಂಚಿನಲ್ಲೂ ಡಾಂಬರು ಕಿತ್ತು ಹಾಳಾಗಿದೆ. ರಸ್ತೆಯಲ್ಲೂ ಗುಂಡಿಗಳಿವೆ. ಮಳೆ ಬಂದಿದ್ದರಿಂದ ರಸ್ತೆಯಲ್ಲಾ ಜಾಲವೃತವಾಗಿತ್ತು. ಗುಂಡಿ ಇರೋದು ಕೂಡ ಕಾಣದೆ, ಬೈಕ್​ನಿಂದ ಕೆಳಗೆ ಬಿದ್ದೆ. ನೀರಿನಿಂದ ತುಂಬಿ ಹೋಗಿದ್ದ ರಸ್ತೆಯಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದ ವೇಳೆ ಕಾರ್ಮಿಕರು ಹಾಗೂ ಫುಡ್​​ ಡೆಲಿವರಿ ಹುಡುಗರು ನನ್ನ ಜೀವ ಕಾಪಾಡಿದರು. ಅವರಿಗೆ ನನ್ನ ಕಡೆಯಿಂದ ಹೃತ್ಫೂರ್ವಕ ಧನ್ಯವಾದಗಳು’ ಎಂದು ಪಲ್ಲವಿ ಚಿದಂಬರ ಹೇಳಿದ್ದಾರೆ.
Koo App
Our leader Pallavi Chidambar’s life was saved by onlookers and workers after she fell down in a potholes of the size of a ditch.
–AAP Bengaluru (@AAPBangalore)22 June 2022

ನಾನು ಮನಸ್ಸು ಮಾಡಿದ್ರೆ ಸಿಎಂ ಆಗುವೆ… ಎನ್ನುತ್ತಲೇ CBI ಅಧಿಕಾರಿಗಳ ಬಗ್ಗೆ ಹೊಸ ಬಾಂಬ್​ ಸಿಡಿಸಿದ ಜನಾರ್ದನ ರೆಡ್ಡಿ

ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್​ಗಳ ಶುಲ್ಕ ಹೆಚ್ಚಳ

ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
