ತುಮಕೂರು:ಕುಣಿಗಲ್​ ತಾಲೂಕು ಅಮೃತೂರು ಹೋಬಳಿ ಸಂಕೇನಪುರದಿಂದ ಹೊಳಲಗುಂದವರೆಗೆ ರಸ್ತೆ ಮಾಡಿರುವುದಾಗಿ ಹೇಳಿದ್ದರು. ಕಾಮಗಾರಿ ಸಂಬಂಧ ಬಿಲ್ ಕೂಡ ಮಾಡಿಕೊಂಡಿದ್ದರು. ಆದರೀಗ ಕಿರಿಯ ಇಂಜಿನಿಯರ್​ ಮಾಡಿಸಿದ್ದ ರಸ್ತೆಯೇ ಮಾಯವಾಗಿದೆ!
ಪರಿಣಾಮ ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ಕುಣಿಗಲ್​ ಉಪವಿಭಾಗದ ಜೆಇ ಟಿ.ಬಿ.ರವಿಕುಮಾರ್​ ತಲೆದಂಡವಾಗಿದೆ. ಕರ್ತವ್ಯಲೋಪ ಹಾಗೂ ನಿರ್ಲಕ್ಷತೆ ಹಿನ್ನೆಲೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರು ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ರವಿಕುಮಾರ್​ರನ್ನು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.
2019-20ನೇ ಸಾಲಿನ ನಬಾರ್ಡ್​ ಯೋಜನೆಯಡಿ ಅನುಮೋದನೆಗೊಂಡಿದ್ದ ಕಾಮಗಾರಿ 2020ರಂದು ಮಾ.6 ಪೂರ್ಣವಾಗಿದ್ದು, ಮೂರು ವರ್ಷದ ನಿರ್ವಹಣಾ ಅವಧಿ ಹೊಂದಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ರಸ್ತೆಯೇ ಮಾಯವಾಗಿದ್ದು, ಇಂಜಿನಿಯರ್​ ಕರ್ತವ್ಯಲೋಪ ದೃಢವಾಗಿದೆ. ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ಉಪವಿಭಾಗ ಕುಣಿಗಲ್​ ಎಇಇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆಯು ಸಂಪೂರ್ಣ ಹಾಳಾಗಿರುವುದು ಕಂಡುಬಂದಿದೆ.
ಸಾವರ್ಕರ್ ಹೆಸರಲ್ಲಿ ತುಮಕೂರು ವಿವಿಯಲ್ಲಿ ಅಧ್ಯಯನ ಪೀಠ!

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 11 =
Remember me
