ಚಿಕ್ಕಮಗಳೂರು:ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎನ್ನುತ್ತಾ ನಗರಸಭೆ ಅಧಿಕಾರಿಗಳ ಎದುರೇ ವ್ಯಾಪಾರಿಯೊಬ್ಬ ತನ್ನ ತಳ್ಳುಗಾಡಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ.
ರಸ್ತೆಬದಿ ವ್ಯಾಪಾರಿಗಳಿಗೆ ನಗರಸಭೆ ಸಿಬ್ಬಂದಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ರಸ್ತೆಬದಿ ತರಕಾರಿ, ಹಣ್ಣು ಮಾರಾಟ ಮಾಡುತ್ತಾ 200-300 ರೂ. ಸಂಪಾದಿಸುತ್ತಿದ್ದ ವ್ಯಾಪಾರಿಗೆ, ರಸ್ತೆಬದಿ ವ್ಯಾಪಾರ ಮಾಡದಂತೆ ನಗರಸಭೆ ಸಿಬ್ಬಂದಿ ಹಲವು ಬಾರಿ ತಾಕೀತು ಮಾಡಿದ್ದರಂತೆ. ಆದರೂ ರಸ್ತೆಬದಿ ವ್ಯಾಪಾರ ಮುಂದುವರಿದಿತ್ತು. ಹಾಗಾಗಿ ಗಾಡಿಯನ್ನ ವಶಕ್ಕೆ ಪಡೆಯಲು ಬಂದ ನಗರಸಭೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ ವ್ಯಾಪಾರಿ, ನಮ್ಮ ಹೊಟ್ಟೆ ಮೇಲೆ ಹೋಡೀತ್ತೀದ್ದೀರಾ… ನಾನೇ ನನ್ನ ಗಾಡಿಗೆ ಬೆಂಕಿ ಹಾಕ್ತೀನಿ… ಎನ್ನುತ್ತಾ ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ರಸ್ತೆಬದಿ ವ್ಯಾಪಾರ ಮಾಡ್ತೀವಿ ಅಂತ ಅದನ್ನೇ ಬಂಡವಾಳ ಮಾಡಿಕೊಂಡ ನಗರಸಭೆಯ ಕೆಲ ಸಿಬ್ಬಂದಿ 500-1000 ರೂಪಾಯಿ ಲಂಚ ಕೇಳ್ತಾರೆ. ಎಲ್ಲಿಂದ ತಂದು ಕೊಡ್ಲಿ? ಫೈನಾನ್ಸ್​ಗೆ ಕಟ್ಟೋದೆ ಕಷ್ಟ, ಇವರಿಗೆ ಹೇಗೆ ಕೊಡೋದು? ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾಲ್ವರನ್ನು ಮದ್ವೆ ಆಗಿದ್ದಾನೆ, ಹಲವರ ಜತೆ ಅಕ್ರಮ ಸಂಬಂಧವಿದೆ, ನನ್ನನ್ನು ಕಾಪಾಡಿ… ಬೆಂಗ್ಳೂರಲ್ಲಿ ಪೇದೆ ಪತ್ನಿ ಕಣ್ಣೀರು

ಹಾವಿನ ಮೊಟ್ಟೆ ಒಡೆಯಲು 54 ದಿನ ಹೆದ್ದಾರಿ ಕಾಮಗಾರಿ ಸ್ಥಗಿತ!

‘ಫ್ಯಾಟ್’ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! ಆಪರೇಷನ್​ ವೇಳೆ ನಡೆಯಿತು ದುರಂತ, ಸತ್ತ ಮೇಲೂ ಬಿಲ್​ ಕೇಳಿದ ಆಸ್ಪತ್ರೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 + seven =
Remember me
