ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಕಾರಿಯಾಗಿ ವರ್ತಿಸಲು ರೋಬಾಟ್ ಬಂದಿವೆ. ಮಿಲಾಗ್ರೋ ಸಂಸ್ಥೆಯು ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ‘ಐಮ್ಯಾಪ್-9’ ಮತ್ತು ‘ಹ್ಯೂಮನಾಯ್ಡ್​ ಇಎಲ್​ಫ್’ ಹೆಸರಿನಲ್ಲಿ ಎರಡು ರೋಬಾಟ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಅಂತರ ಕಾಯ್ದುಕೊಂಡು ರೋಗಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಸಹಕರಿಸಲಿದೆ.
ಐಸಿಎಂಆರ್ ಶಿಫಾರಸು ಮಾಡಲಾದ ಸೋಡಿಯಂ ಹೈಡ್ರೋಕ್ಲೊರೈಟ್ಸ್ ಸಲ್ಯೂಷನ್ ಬಳಸಿ ಐಮ್ಯಾಪ್ ರೋಬೋ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸಲಿದೆ. ಈಗಾಗಲೇ ಇದನ್ನು ದೆಹಲಿಯ ಏಮ್ಸ್​ನಲ್ಲಿ ಬಳಸಲಾಗುತ್ತಿದೆ. ಹ್ಯೂಮನಾಯ್ಡ್​ ಇಎಲ್​ಫ್ ರೋಗಿಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ನೆರವಾಗಲಿದೆ.
ಆಸ್ಪತ್ರೆ ಸುತ್ತ ಸಂಚರಿಸಲಿದ್ದು, ಸುತ್ತಮುತ್ತಲಿನ ಅಂಶವನ್ನು ವೀಡಿಯೋ ಮತ್ತು ಆಡಿಯೋ ರೆಕಾರ್ಡ್ ಮಾಡಲಿದೆ. ಇದು 8 ಗಂಟೆಗಳ ಬ್ಯಾಟರಿ ಬ್ಯಾಕ್​ಅಪ್ ಹೊಂದಿದೆ ಎಂದು ಮಿಲಾಗ್ರೋ ಕಂಪನಿ ಅಧ್ಯಕ್ಷ ರಾಜೀವ್ ಕಾರ್ವಾಲ್ ತಿಳಿಸಿದ್ದಾರೆ.
ಎಲ್ಲ ರಾಜ್ಯಗಳ ಸಿಎಂ ಜತೆ ಏ.27ರಂದು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ : ಲಾಕ್​ಡೌನ್ ಬಗ್ಗೆ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 7 =
Remember me
