ಮೈಸೂರು:ಕರೊನಾ ಸೋಂಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಡಳಿತ ವಿನೂತನ ಪ್ಲ್ಯಾನ್ ಮಾಡಿದೆ. ಕರೊನಾ ಮುಕ್ತ ಗ್ರಾಮಗಳಿಗೆ ಅಭಿನಂದನಾ ಪತ್ರದ ಜತೆಗೆ ನಗದು ಬಹುಮಾನ ಕೊಟ್ಟು ಅಭಿನಂದಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಘೋಷಿಸಿದ್ದಾರೆ. ಆ ಮೂಲಕ ಗ್ರಾಮ ಪಂಚಾಯಿತಿಗಳ ನಡುವೆಯೇ ಸೋಂಕು ನಿಯಂತ್ರಣಾ ಸ್ಪರ್ಧೆಯನ್ನ ಪರೋಕ್ಷವಾಗಿ ಹುಟ್ಟು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್​ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ. ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಮುಕ್ತ ಮಾಡಿದ್ರೆ ಅವರಿಗೆ ಪ್ರಶಸ್ತಿ ಕೊಡ್ತೇವೆ. ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಮಾಡಿದರೆ ಮಾಹಿತಿ‌ ನೀಡುವಂತೆ‌ ಪ್ರಧಾನಿ ಕೇಳಿದ್ದಾರೆ. ನಾವು ಶುರು ಮಾಡಿರುವ ಕೋವಿಡ್ ಮಿತ್ರ ಪರಿಕಲ್ಪನೆಯನ್ನ ಮೈಸೂರಿನಿಂದ ಕಳುಹಿಸುತ್ತೇವೆ. ಜಿಲ್ಲೆಯ 175 ಪ್ರಾಥಮಿಕ ಕೇಂದ್ರಗಳು ಕೋವಿಡ್ ಮಿತ್ರ ಆಗಿದೆ. ಸೋಂಕಿನ ಲಕ್ಷಣ ಇದ್ದವರು‌ ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸೋಂಕಿತರಿಗೆ ಮೊದಲ 5 ದಿನ ಮುಖ್ಯವಾದದ್ದು. ತಕ್ಷಣ ಅಗತ್ಯ ಮೆಡಿಸಿನ್ ಕೊಡುವ ಕೆಲಸವಾಗುತ್ತಿದೆ. ಇದರಿಂದ ನಗರ ಆಸ್ಪತ್ರೆಗಳ ಅವಲಂಬನೆ ಕಡಿಮೆಯಾಗಿದೆ. ಇದೇ ರೀತಿ‌ ನಗರದಲ್ಲೂ ಕೋವಿಡ್ ಮಿತ್ರ ಸೆಂಟರ್ ತೆರೆಯುತ್ತಿದ್ದೇವೆ ಎಂದರು.ಇದನ್ನೂ ಓದಿರಿಕರೊನಾ ಇಲ್ಲದಿದ್ದರೂ ಸೀಮೆಎಣ್ಣೆ ಕುಡಿದ ಯುವಕ! ಸಾಯಲು ಅಲ್ಲ, ಬದುಕಲು… ಮುಂದೆ ಆಗಿದ್ದೆಲ್ಲವೂ ಅವಾಂತರ
ಜಿಲ್ಲೆಯಲ್ಲಿ ಟೆಲಿ ಮೆಡಿಸಿನ್ ಚೆನ್ನಾಗಿ ವರ್ಕ್ ಆಗುತ್ತಿದೆ. ಯುಕೆ ನಲ್ಲಿರುವ ಮೈಸೂರಿನ ವೈದ್ಯರು ಭಾಗಿಯಾಗುತ್ತಿದ್ದಾರೆ. ನುರಿತ ವೈದ್ಯರಿಂದ ಜನರಿಗೆ ಟೆಲಿ ಟ್ರೀಟ್​ಮೆಂಟ್ ಕೊಡುವ ಕೆಲಸವಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಟೆಲಿ ಮೆಡಿಸನ್ ಮೂಲಕ ಜನರ ಆತ್ಮವಿಶ್ವಾಸ ತುಂಬುವ ಕೆಲಸವಾಗುತ್ತಿದೆ ಎಂದು ರೋಹಿಣಿ ಸಿಂಧೂರಿ‌ ಹೇಳಿದರು. ಇನ್ನು ಕರೊನಾ ಮುಕ್ತ ಗ್ರಾಮಕ್ಕೆ 25 ಸಾವಿರ ರೂಪಾಯಿ ನಗದು ಬಹುಮಾನ ಕೊಡಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಕರೊನಾ ಸೋಂಕಿನಿಂದ ಸತ್ತವನ ಮೃತದೇಹ ತಬ್ಬಿಕೊಂಡು ತುಟಿಗೆ ಮುತ್ತಿಟ್ಟ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eleven =
Remember me
