ಮೈಸೂರು:ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಐಎಎಸ್​ ಅಧಿಕಾರಿ ಶಿಲ್ಪಾನಾಗ್​ ತಿರುಗಿಬಿದ್ದ ಬೆನ್ನಲ್ಲೇ ಹಾಸನದ ಎ.ಮಂಜು ಎಂಟ್ರಿ ಕೊಟ್ಟಿದ್ದಾರೆ. ಇವಾಗ ಯಾರ್ ಬೇಕಾದ್ರೂ ಐಎಎಸ್ ಮಾಡ್ತಾರೆ. ದನ ಕಾಯುವವನೂ ಐಎಎಸ್ ಮಾಡ್ತಾನೆ. ಆದ್ರೆ ಜನರ ಸೇವೆ ಹೇಗೆ ಮಾಡುತ್ತೇವೆ ಅನ್ನೋದು ಮುಖ್ಯ ಎನ್ನುವ ಮೂಲಕ ರೋಹಿಣಿ ಸಿಂಧೂರಿ ವಿರುದ್ಧದ ಸಮರಕ್ಕೆ ಮತ್ತಷ್ಟು ಕಿಚ್ಚು ಹತ್ತಿಸಿದ್ದಾರೆ ಎ.ಮಂಜು.
ಐಎಎಸ್ ಪಾಸ್​ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಕರೊನಾ ಟೈಮ್​ನಲ್ಲಿ ಇದು ಬೇಕಿತ್ತಾ? ಸರ್ಕಾರಿ ಅಧಿಕಾರಿ ಒಂದೇ ಕಡೆ ಇರುತ್ತಾರಾ? 5 ವರ್ಷ ಆದ ಮೇಲೆ ವರ್ಗಾವಣೆ ಆಗುತ್ತಾರೆ. ಇದು ಗುತ್ತಿಗೆ ಕಂಟ್ರ್ಯಾಕ್ಟರ್​ಗಾಗಿ ಮಾಡಿರುವ ಕೆಲಸ ಅಷ್ಟೆ ಎಂದು ಮಾಜಿ ಸಚಿವ ಎ. ಮಂಜು ವಾಗ್ದಾಳಿ ನಡೆಸಿದರು.ಇದನ್ನೂ ಓದಿರಿಸಿಂಧೂರಿ ವರ್ಗಾವಣೆ ಆಗಲ್ಲ, ಶಿಲ್ಪಾನಾಗ್ ರಾಜೀನಾಮೆಗೆ ಕಿಮ್ಮತ್ತು ಸಿಗೋದೆ ಡೌಟು! ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ ​
ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರ ಕಂಟ್ರೋಲ್‌ಗೆ ತೆಗೆದುಕೊಳ್ಳಬಹುದು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಕೆಲಸ ಮಾಡಿದ್ದಾರೆ. ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಾನು ನೋಡಿದ್ದೇನೆ. ನಿರ್ವಹಣೆ ಮಾಡುವ ಸಂದರ್ಭದಲ್ಲಿ ಜನಪ್ರತಿನಿದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಡಿಸಿ ಅಂದ್ರೆ ಜಿಲ್ಲೆಯ ಮೊದಲ ಸೇವಕರು. ಅಧಿಕಾರಿಗಳು ಇಷ್ಟ ಬಂದ ಹಾಗೆ ಕೆಲಸ ಮಾಡಲು ಅವಕಾಶವಿಲ್ಲ. ನನ್ನ ಅವಧಿಯಲ್ಲಿ ಕೆಲಸ ಮಾಡುವಾಗ ಕೆಲ ತಪ್ಪುಗಳನ್ನು ತಿದ್ದಿದ್ದೆ, ತಿಳಿ ಹೇಳಿದ್ದೆ. ಜನರು ಬರುವಾಗ ಕಾಲ ಮೇಲೆ ಕಾಲು ಹಾಕಿ ಕುಳಿತು ಕೊಳ್ಳುವುದು ಬೇಡ. ಗೌರವ ಕೊಡಬೇಕು ಎಂದು ಸಿಂಧೂರಿಗೆ ಹೇಳಿದ್ದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಸಿಎಂ ಗಮನಕ್ಕೂ ತಂದಿದ್ದೆ. ಹಾಸನಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಬಂದಿದ್ದಾಗ ಅವರನ್ನು ಆಹ್ವಾನಿಸಲು ಪ್ರೋಟೋಕಾಲ್ ಪ್ರಕಾರ ಡಿಸಿ ಬರಬೇಕಿತ್ತು. ಆದ್ರೆ ರೋಹಿಣಿ ಸಿಂಧೂರಿ ಬರಲಿಲ್ಲ. ಆಗ ಅವರನ್ನು ವರ್ಗಾವಣೆ ಮಾಡುವಂತೆ ಸಿದ್ದರಾಮಯ್ಯಗೆ ಹೇಳಿದ್ದೆ. ನಂತರದ ಚುನಾವಣೆಯಲ್ಲಿ ನಾನು ಸೋತೆ, ಅವರ ಪರ ಯಾರಿದ್ದಾರೋ ಅವರೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಲು ಮುಂದಾದರು ಎಂದು ಎ. ಮಂಜು ಹೇಳಿದರು.
ಚುನಾಯಿತ ಪ್ರತಿನಿಧಿಗಳೊಂದಿಗೆ ಅಗೌರವದೊಂದಿಗೆ ನಡೆದುಕೊಳ್ಳುವುದು ಸರಿಯಿಲ್ಲ. ಎಲ್ಲವೂ ನನಗೆ ಗೊತ್ತಿದೆ, ನಾನ್ ಹೇಳಿದ್ದೇ ಆಗಬೇಕು ಅನ್ನೋದು ಸರಿಯಲ್ಲ. ಕರೊನಾ ಸಂಕಷ್ಟದಲ್ಲಿ ಸ್ವಿಮ್ಮಿಂಗ್ ಪೂಲ್ ಅವಶ್ಯಕತೆ ಇತ್ತಾ? ರಾಜ್ಯದಲ್ಲಿ 20 ಏರಿಟೇಜ್ ಸಿಟಿಗಳಿವೆ, ಈ ಪೈಕಿ ಮೈಸೂರು ಒಂದು. ಈ ವಿಚಾರ ಚರ್ಚೆಗೆ ಬಂದ ಮೇಲೆ ಸರ್ಕಾರ ಕೇಳಬೇಕಿತ್ತು ಎಂದರು.
ರೋಹಿಣಿ ಸಿಂಧೂರಿ ಸೇವೆಯೇ ಮೋಸದ್ದು, ರಾಜಕಾರಣಿಗಳು 5 ವರ್ಷಕ್ಕೆ ಒಂದೊಂದು ಐಎಎಸ್ ಮಾಡಿದಂತೆ…

ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
