ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರನ್ನ ಕಂಡರೆ ಪ್ರತಿಕ್ಷಗಳಿಗೆ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಿದೆ. ಪ್ರತಿಯೊಂದಕ್ಕೂ ಮೋದಿ ಅವರನ್ನೇ ಬ್ಲೇಮ್​ ಮಾಡ್ತಾರೆ ಎಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, 2016ರ ಜನವರಿ 17ರಂದು ನಡೆದಿದ್ದ ಹೈದರಾಬಾದ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್​ ವೇಮುಲ ಆತ್ಮಹತ್ಯೆ ಪ್ರಕರಣವನ್ನ ನೆನಪಿಸಿಕೊಂಡಿದ್ದಾರೆ.
ರೋಹಿತ್​ ವೇಮುಲ ಆತ್ಮಹತ್ಯೆ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ದಿನಕ್ಕೊಂದು ತಿರುವು ಪಡೆದುಕೊಂಡಿತ್ತಲ್ಲದೇ ಈ ಸಾವಿನ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು, ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪಿಎಚ್​ಡಿ ಓದುತ್ತಿದ್ದ ವೇಮುಲನನ್ನು ಹಾಸ್ಟೆಲ್​ನಿಂದ ಹೊರಹಾಕಲಾಗಿತ್ತು. ಇದೇ ಕಾರಣಕ್ಕೆ ಮನನೊಂದ ವೇಮುಲ ಸಾವಿನ ಮನೆಯ ಕದ ತಟ್ಟಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು. ಈ ಕುರಿತು ಇಂದು(ಸೋಮವಾರ) ರಾಜ್ಯರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿ.ಟಿ. ರವಿ, ರೋಹಿತ್​ ವೇಮುಲ ಸತ್ತತ್ತು ಪ್ರೇಮ ವೈಫಲ್ಯದಿಂದ. ಆದರೂ, ಕೆಲವರು ಈ ಸಾವಲ್ಲೂ ಮೋದಿ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದರು. ವಿಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದಲಿತರಿಗೆ ರಕ್ಷಣೆ ಇಲ್ಲ ಎಂದು ಅಶಾಂತಿ ಸೃಷ್ಟಿಸಿದ್ದರು. ಆದರೆ ತನಿಖೆಯಲ್ಲಿ ಸಾವಿನ ಕಾರಣ ಬಯಲಾಯ್ತು. ಈ ಪ್ರಕರಣವೇ ಸಾಕ್ಷಿ ನರೇಂದ್ರ ಮೋದಿ ಅವರನ್ನ ಕಂಡರೆ ವಿಪಕ್ಷಗಳಿಗೆ ಅದೆಷ್ಟು ದ್ವೇಷ, ಹೊಟ್ಟೆಕಿಚ್ಚು ಇದೆ ಎಂದರು.
ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ರಾತ್ರೋರಾತ್ರಿ ಮಲಗಿದ್ದಲ್ಲೇ ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seven =
Remember me
