ಬೆಂಗಳೂರು:ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸುಹೈಲ್ ಅಲಿಯಾಸ್ ಲಂಗ್ಡಾ ಕೊಲೆಯಾದ ರೌಡಿಶೀಟರ್. ರೌಡಿಶೀಟರ್ ತನ್ವೀರ್​ನೊಂದಿಗೆ ಸುಹೈಲ್ ಗುರುತಿಸಿಕೊಂಡಿದ್ದ. ಇತ್ತೀಚಿಗೆ ವಿರೋಧಿ‌ ಗುಂಪಿನೊಂದಿಗೆ ಗಲಾಟೆ ಮಾಡಿಕೊಂಡಿದ್ದ.‌ ಇದರಿಂದ ಆಕ್ರೋಶಗೊಂಡಿದ್ದ ದುಷ್ಕರ್ಮಿಗಳು ಈತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ಬುಧವಾರ ಡಿ.ಜೆ.ಹಳ್ಳಿಯ ಮೋದಿ ರಸ್ತೆಯಲ್ಲಿ ಸುಹೈಲ್ ಒಂಟಿಯಾಗಿ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಬಲವಾದ ಮಾರಕಾಸ್ತ್ರ‌ದಿಂದ ಹಲ್ಲೆನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೇ ದ್ವೇಷಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆಯ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ‌. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುಹೇಲ್​ ಹತ್ಯೆಯ ನಡೆದ ದೃಶ್ಯಕ್ಕಾಗಿ ವಿಜಯವಾಣಿ ಫೇಸ್​ಬುಕ್​ನ ಈ ಲಿಂಕ್​ ಕ್ಲಿಕ್​ ಮಾಡಿhttps://www.facebook.com/VVani4U/videos/2907794116104615
ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

ಪರ್ಮನೆಂಟ್ ಜಾಬ್​ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್​

ಪ್ರಿಯಕರನ ರೂಮಿನಲ್ಲಿ ಪ್ರೇಯಸಿ ಶವ ಪತ್ತೆ! ಆಸ್ಪತ್ರೆ ಸೇರಿದ ಪ್ರಿಯಕರನಲ್ಲಿ ಅಡಗಿದೆ ಸಾವಿನ ರಹಸ್ಯ

ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
